Advertisement

ಕೆಲಸದಿಂದ ತೆಗೆಯಲು ಬಿಡಲ್ಲ

01:51 PM Jul 06, 2021 | Team Udayavani |

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವ ವಿಚಾರವಾಗಿ ನಡೆದ ಸಭೆಯಲ್ಲಿ ರೈತ ಸಂಘದ ಮುಖಂಡರು ಹಾಗೂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕವಿಕ್ರಂರಾಜೇ ಅರಸು ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಕಾರ್ಖಾನೆ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎಂ ಆರ್‌ಎನ್‌ ಸಂಸ್ಥೆಯ ಆಡಳಿತಾಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತಿದ್ದೀರಾ, ಅವರನ್ನು ಕೆಲಸದಿಂದ ತೆಗೆಯಲು ರೈತಸಂಘ ಅವಕಾಶ ನೀಡುವುದಿಲ್ಲ. ನೌಕರರನ್ನುಕೆಲಸದಿಂದ ಬಿಡುಗಡೆಗೊಳಿಸಿರುವ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇಷ್ಟಾದರೂ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಕೆಲಸವಾಗಿಲ್ಲ. ಕೋರ್ಟ್‌ ಆದೇಶಕ್ಕೆ ಗೌರವ ನೀಡಬೇಕೆನ್ನುವ ಕನಿಷ್ಠ ಜ್ಞಾನವೂ ಇಲ್ಲವೇ ನಿಮಗೆ ಎಂದು ಪಿಎಸ್‌ಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ವಿಕ್ರಂರಾಜೇ ಅರಸು ಅವರನ್ನು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್‌. ಕೆಂಪೂಗೌಡ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮುಖಂಡ ಕೆ.ಎಸ್‌ .ನಂಜುಂಡೇಗೌಡ ಮಾತನಾಡಿ, ಅಧಿಕಾರಿಗಳು ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು ಎಂದರು.

ಸಭೆಗೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕ ವಿಕ್ರಂರಾಜೇಅರಸು, ನಾವು ಕಾನೂನು ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಬಿಡುಗಡೆಗೊಂಡಿರುವ 21 ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಎಂಆರ್‌ಎನ್‌ ಶುಗರ್ಗೆ ಪತ್ರ ಬರೆ ಯಲಾಗಿದೆ ಎಂದು ಸ್ಪಷ್ಟಪಡಿಸಿದರು.ಇದಕ್ಕೆ ಒಪ್ಪದ ರೈತ ಸಂಘದ ಮುಖಂಡರು ನಾಳೆಯೊಳಗೆ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳದಿದ್ದರೆ ಕಾರ್ಖಾನೆ ಆವರಣದಲ್ಲಿ ನೌಕರರೊಂದಿಗೆರೈತಸಂಘ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಬಿಜೆಪಿ ಮುಖಂಡ ಕೆ. ಎಸ್‌.ನಂಜುಂಡೇಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ, ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್‌, ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್‌, ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷ ಪಿ.ನಾಗರಾಜು, ಹರವು ಪ್ರಕಾಶ್‌, ಮುಖಂಡರಾದಪಾಂಡು, ಕಡತನಾಳು ಬಾಲಕೃಷ್ಣ, ಎಣ್ಣೆಹೊಳೆಕೊಪ್ಪಲು ಮಂಜುನಾಥ್‌, ವೈ.ಜಿ.ರಘು, ಗುತ್ತಿಗೆ ನೌಕರರಾದ ಆನಂದ್‌, ಮಧು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next