Advertisement
ಅರಂಪಾಡಿ, ಎಡ್ಡೋಳಿ ಎಂಬಲ್ಲಿ ಲೋಕೋಪಯೋಗಿ ಯೊಜನೆಯಡಿ ಸಂಪರ್ಕ ರಸ್ತೆಯಾಗಲಿದ್ದು ಅದು ಅರಣ್ಯ ಪ್ರದೇಶವಾಗಿದೆ. ಇಲ್ಲಿ ಬೆಲೆಬಾಳುವ ಮರಗಳಿವೆ. ಮರಗಳ್ಳರಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ ಆ ಪ್ರದೇಶದಿಂದ ಹೆಣ್ಣು ಮಕ್ಕಳು ಹಾಗೂ ಹೆಂಗಸರು ನಡೆದಾಡದಂತಾಗಬಹುದು. ಆದುದರಿಂದ ಸುಬ್ರಹ್ಮಣ್ಯ ವ್ಯಾಪ್ತಿಯ ಆಸುಪಾಸಿನಲ್ಲಿ ಹಾಗೂ ಅರಂಪಾಡಿ, ಮಲೆಯಾಳ ಎಂಬಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡ ಬಾರದು ಹಾಗೂ ಅವಕಾಶ ನೀಡಿದ್ದಲ್ಲಿ ಉಗ್ರವಾದ ಪ್ರತಿಭಟನೆಯನ್ನು ಮಾಡಲು ಊರಿನ ಹಾಗೂ ಸಂಘ, ಸಂಸ್ಥೆಯ ಜನರು ಸಿದ್ಧರಾಗಿದ್ದೇವೆ ಆದುದರಿಂದ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆ ಸುಬ್ರಹ್ಮಣ್ಯ ಮತ್ತು ಸ್ಥಳೀಯ ನಾಗರಿಕರು ಸೋಮವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರು.
Advertisement
ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಪಂ. ಗೆ ಮನವಿ
03:30 AM Jul 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.