Advertisement

ತಿವಾರಿಗೆ ಕೈ ಕೊಟ್ಟ ಕಾಂಗ್ರೆಸ್‌; ಪಂಜಾಬ್‌ ಚುನಾವಣ ಪ್ರಚಾರಕರ ಪಟ್ಟಿಯಿಂದ ಕೊಕ್‌

11:46 PM Feb 05, 2022 | Team Udayavani |

ಚಂಡೀಗಢ‌: ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯ ದಲ್ಲಿ ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆ ಸುವ ಕಾಂಗ್ರೆಸ್‌ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ಪಕ್ಷದಲ್ಲಿ ಆಂತರಿಕ ಅಸಮಾ ಧಾನಕ್ಕೆ ಕಾರಣವಾ ಗಿದೆ. ಪಕ್ಷದ ಹಿರಿಯ ನಾಯಕರಾದ ಮನೀಶ್‌ ತಿವಾರಿ ಹಾಗೂ ಗುಲಾಂ ನಬಿ ಆಜಾದ್‌ ಅವರನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಖುದ್ದು ಮನೀಶ್‌ ತಿವಾರಿ ಅಚ್ಚರಿ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ಹೆಸರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದರ ಹಿಂದಿನ ರಾಜರಹಸ್ಯವೇನು ಎಂಬುದನ್ನು ತಿಳಿಯಬ ಹುದೇ. ಅದೇನೂ ಪಂಜಾಬ್‌ ರಾಜ್ಯದ ಹಿತ ದೃಷ್ಟಿಯಿಂದ ಕೈಗೊಂಡ ನಿರ್ಧಾರವೇ? ಎಂದು ಟ್ವೀಟ್‌ ಮಾಡುವ ಮೂಲಕ ಪಕ್ಷದ ಹೈಕಮಾಂಡ್‌ ಅನ್ನು ಪ್ರಶ್ನಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರ ಪುತ್ರ ಅಭಿಜಿತ್‌ ಮುಖರ್ಜಿ ಕೂಡ, ಪಟ್ಟಿಯಿಂದ ಈ ಇಬ್ಬರನ್ನು ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥ ಸಂಕುಚಿತ ನಿರ್ಧಾರ ಗಳನ್ನು ಕೈಗೊಳ್ಳುವ ಕಾಂಗ್ರೆಸ್‌ ಯಾವುದೇ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ. ಗುಲಾಂ ನಬಿ ಆಜಾದ್‌ ಅವರ ಹೆಸರನ್ನು ಪಂಜಾಬ್‌ನ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟಿದ್ದರೂ ಉತ್ತರ ಪ್ರದೇಶದ 3ನೇ ಹಂತದ ಚುನಾವಣೆಗಾಗಿನ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಆದರೆ ಮನೀಶ್‌ ಅವರು ಹಾಲಿ ಸಂಸದ. ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಲೇ ಬಂದವರು. ಅಂಥವರನ್ನೇ ಕೈಬಿಟ್ಟಿರು ವುದು ಸೋಜಿಗದ ಸಂಗತಿಯಾಗಿದೆ.

ನಾಳೆ ಬಿಜ್ನೋರ್‌ಗೆ ಪ್ರಧಾನಿ
ಉತ್ತರ ಪ್ರದೇಶದ ಬಿಜ್ನೋರ್‌ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಅಲ್ಲಿ ನಡೆಯಲಿರುವ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ಬಾರಿಯ ಉತ್ತರ ಪ್ರದೇಶ ಚುನಾವಣ ದಿನಾಂಕಗಳು ಪ್ರಕಟಗೊಂಡ ಅನಂತರ ಪ್ರಧಾನಿ ವೈಯಕ್ತಿಕವಾಗಿ ಪಾಲ್ಗೊಳ್ಳುತ್ತಿರುವ ಮೊದಲ ರ್ಯಾಲಿಯಿದು. ದಿನಾಂಕ ಪ್ರಕಟವಾದಾಗಿನಿಂದ ಇಲ್ಲಿಯವರೆಗೆ ಪ್ರಧಾನಿಯವರು ವರ್ಚುವಲ್‌ ರ್ಯಾಲಿಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದರು.

ರಾಹುಲ್‌ ಟೂರಿಸ್ಟ್‌ ರಾಜಕಾರಣಿ: ಸಿ.ಟಿ. ರವಿ
“ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಗೋವಾಕ್ಕೆ ಪ್ರವಾಸಕ್ಕೆಂದು ಮಾತ್ರ ಬರುತ್ತಾರೆ. ಪ್ರತೀ ಬಾರಿ ಚುನಾವಣೆ ಘೋಷಣೆಯಾದಾಗ ಮಾತ್ರ ಇವರಿಗೆ ಗೋವಾ ನೆನಪಾಗುತ್ತದೆ. ಹಾಗಾಗಿ ಇವರೊಬ್ಬ ಪ್ರವಾಸಿ ರಾಜಕಾರಣಿ’ ಎಂದು ಗೋವಾದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಕರ್ನಾಟಕದ ಬಿಜೆಪಿ ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ. ಕ್ಯಾಲಂಗುಟ್‌ ಪ್ರಾಂತ್ಯದಲ್ಲಿ ಮನೆ ಮನೆ ಪ್ರಚಾರ ನಡೆಸಿದ ವೇಳೆ ಅವರು ಹೀಗೆ ಹೇಳಿದ್ದಾರೆ.

Advertisement

ಉ.ಪ್ರ: ಬಿಎಸ್‌ಪಿ ಪಟ್ಟಿ ಬಿಡುಗಡೆ
ಉತ್ತರ ಪ್ರದೇಶದ ಮೂರನೇ ಹಂತದ ಚುನಾವಣೆಗಾಗಿ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಅದರಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹೊÉàಟ್‌, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್‌, ಹಿರಿಯ ನಾಯಕರಾದ ಕಮಲ್‌ನಾಥ್‌, ಸಲ್ಮಾನ್‌ ಖುರ್ಷೀದ್‌, ಮಾಜಿ ಕ್ರಿಕೆಟಿಗ ಹಾಗೂ ತೆಲಂಗಾಣದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಅಜರುದ್ದೀನ್‌ ಮುಂತಾದವರ ಹೆಸರುಗಳಿವೆ.

ಯೋಗಿ ವಿರುದ್ಧ ಖ್ವಾಜಾ ಕಣಕ್ಕೆ
ಉತ್ತರ ಪ್ರದೇಶದಲ್ಲಿ ಸದ್ಯದಲ್ಲೇ ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) 54 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸ್ಪರ್ಧಿಸಿರುವ ಗೋರಖ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಖ್ವಾಜಾ ಸಂಸುದ್ದೀನ್‌ ಎಂಬವರನ್ನು ಬಿಎಸ್‌ಪಿ ಕಣಕ್ಕಿಳಿಸಿದೆ. ಖ್ವಾಜಾ ಸೇರಿದಂತೆ ಪಟ್ಟಿಯಲ್ಲಿ ಏಳು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಖುಷಿ ನಗರ್‌ ಜಿಲ್ಲೆಯ ಫಾಜಿಲ್‌ ನಗರ್‌ ಕ್ಷೇತ್ರದಲ್ಲಿ ಸಂತೋಷ್‌ ತಿವಾರಿ ಎಂಬವರನ್ನು ಕಣಕ್ಕಿಳಿಸಲಾಗಿದ್ದು, ಇವರು ಈ ಕ್ಷೇತ್ರದ ಪ್ರಮುಖ ಅಭ್ಯರ್ಥಿಯಾಗಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಸ್ವಾಮಿ ಪ್ರಸಾದ್‌ ಮೌರ್ಯ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪ್ರಸಾದ್‌ ಮೌರ್ಯ ಅವರು ಈ ಹಿಂದೆ ಬಿಎಸ್‌ಪಿಯಲ್ಲಿದ್ದವರು.

Advertisement

Udayavani is now on Telegram. Click here to join our channel and stay updated with the latest news.

Next