Advertisement

ಶೈಕ್ಷಣಿಕ ವರ್ಷವನ್ನು ಸ್ಥಗಿತಗೊಳಿಸುವುದಿಲ್ಲ: ಟ್ರಂಪ್

03:31 PM Aug 23, 2020 | Suhan S |

ವಾಷಿಂಗ್ಟನ್‌: ಕೋವಿಡ್ ಸೋಂಕು ಕಾರಣದಿಂದಾಗಿ ಅಮೆರಿಕದಲ್ಲಿನ ವಿಶ್ವವಿದ್ಯಾಲಯಗಳು ತರಗತಿಯನ್ನು ರದ್ದುಗೊಳಿಸಿದ್ದು, ಈ ಕ್ರಮವು ವಿದ್ಯಾರ್ಥಿಗಳ ಜೀವ ಉಳಿಸುವ ಬದಲಾಗಿ ಜೀವನವನ್ನು ಕಸಿದುಕೊಳ್ಳುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಟ್ರಂಪ್‌, ಕಾಲೇಜು ವಿದ್ಯಾರ್ಥಿಗಳಿಗೆ ತಗುಲುವ ಈ ಕೊರೊನಾ ಸೋಂಕು, ಸಾಮಾನ್ಯ ಜ್ವರಕ್ಕೆ ಹೋಲುತ್ತದೆ. ವಿದ್ಯಾರ್ಥಿಗಳು ಮನೆಯಲ್ಲಿ ಇರುವುದರಿಂದಲೇ ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚು ಎಂದು ತಮ್ಮ ವಾದ ಮಂಡಿಸಿದ್ದಾರೆ. ಅಮೆರಿಕದಲ್ಲಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಶಾಲೆಗಳಿಗೆ ನೀಡಿದ ಅನುದಾದ ತಡೆ ಹಿಡಿಯುವುದಾಗಿ ಮತ್ತು ತೆರಿಗೆ ವಿನಾಯಿತಿ ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ಈ ಹಿಂದೆ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಅಧ್ಯಕ್ಷರ ಈ ಹೇಳಿಕೆಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಮೆರಿಕ ಆರೋಗ್ಯ ತಜ್ಞರು ಕೋವಿಡ್ ವೈರಸ್‌ ರೋಗವು ಜ್ವರಕ್ಕಿಂತ ಮಾರಕವಾಗಿದೆ ಹಾಗೂ ಸುಲಭವಾಗಿ ಈ ವೈರಾಣು ಹರಡುತ್ತದೆ ಎಂದು ಹೇಳಿದ್ದಾರೆ.

ಇದಲ್ಲದೇ, ಕಾಲೇಜು ವಿದ್ಯಾರ್ಥಿಗಳಿಗೂ ಸಹ ಈ ರೋಗ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಗ್ಯ ತಜ್ಞರ ಹೇಳಿಕೆಯನ್ನು ಉಲ್ಲೇಖೀಸಿದ ಟ್ರಂಪ್‌, ಕಾಲೇಜು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿ ತಮ್ಮ ಕುಟುಂಬದವರೊಂದಿಗೆ ಹಾಗೂ ವಯಸ್ಸಾದವರೊಂದಿಗೆ ಇದ್ದರೆ ವೈರಸ್‌ ಹರಡುವ ಭೀತಿ ಇರುತ್ತದೆ. ಅದರ ಬದಲಾಗಿ ಇತರ ಯುವಜನರೊಂದಿಗೆ ವಾಸಿಸುವುದು ಸುರಕ್ಷಿತ ಎಂದಿದ್ದಾರೆ. ಶಾಲೆ – ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿರಸಲು ವಿಶ್ವವಿದ್ಯಾಲಯಗಳು ತೆಗೆದುಕೊಳ್ಳಬಹುದಾದ ಸರಳ ಕ್ರಮಗಳಿವೆ ಎಂದು ಹೇಳಿದ ಟ್ರಂಪ್‌, ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಂತೆ ನೋಡಿಕೊಳ್ಳಬೇಕು ಹಾಗೂ ಅಂತಹವರೊಂದಿಗಿನ ಸಂವಹನವನ್ನು ಮಿತಿಗೊಳಿಸಬೇಕು. ಓರ್ವ ವಿದ್ಯಾರ್ಥಿ ರೋಗದಿಂದ ಬಳಲಿದರೆ ಮತ್ತೋರ್ವನಿಗೆ ಇದು ಹರಡಲಿದೆ ಆದ್ದರಿಂದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ರಕ್ಷಿಸುವ ಕ್ರಮಗಳನ್ನು ಜಾರಿಗೆ ತಂದು ತರಗತಿಗಳನ್ನು ನಡೆಸಬೇಕು ಎಂದು ಟ್ರಂಪ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next