Advertisement

ವಿಜ್ಞಾನಿಗಳ ಸಾಧನೆಯನ್ನು ಪಕ್ಷದ ಸಾಧನೆ ಎಂದಿಲ್ಲ

07:15 AM Mar 29, 2019 | Vishnu Das |

ಬೆಂಗಳೂರು: ಬಾಹ್ಯಾಕಾಶದಲ್ಲಿ ಉಪಗ್ರಹ ನಿಗ್ರಹ ಕ್ಷಿಪಣೆ ಪರೀಕ್ಷೆಯ ಹಿರಿಮೆ ಡಿಆರ್‌ಡಿಒ ವಿಜ್ಞಾನಿಗಳಿಗೆ ಸಲ್ಲುತ್ತದೆ. ಇದನ್ನು ಬಿಜೆಪಿ ಸಾಧನೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್‌ ಇದನ್ನು ರಾಜಕೀಯಗೊಳಿಸ ಬಾರದು. ಮುಖ್ಯವಾಗಿ ಕಾಂಗ್ರೆಸ್‌ ದೇಶವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಮುರಳೀಧರ್‌ ರಾವ್‌ ಹೇಳಿದರು.

Advertisement

ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಪ್ರಸ್ತಾಪಿಸಿದ್ದಾರೆ. ಎಲ್ಲಿಯೂ ಪಕ್ಷದ ಸಾಧನೆ ಎಂದು ಹೇಳಿಲ್ಲ. ವಿಜ್ಞಾನಿಗಳಿಗೆ ಅದರ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದ್ದಾರೆ. ಹಾಗಿದ್ದರೂ, ಕಾಂಗ್ರೆಸ್‌ ರಾಜಕೀಯ ಬೆರೆಸುತ್ತಿದೆ ಎಂದು ದೂರಿದರು. ಇಸ್ರೋ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಅವರು ಪೋಖ್ರಾನ್‌ ಅಣು ಪರೀಕ್ಷೆಯಷ್ಟೇ “ಮಿಷನ್‌ ಶಕ್ತಿ’ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ, ಡಿಆರ್‌ಡಿಒ ಮಾಜಿ ಮುಖ್ಯಸ್ಥ ವಿ.ಕೆ.ಸಾರಸ್ವತ್‌ ಅವರು, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕ್ಕೆ ಹಿಂದಿನ ಸರ್ಕಾರಗಳ ಅವಧಿಯಲ್ಲೂ ಪ್ರಯತ್ನ ನಡೆದಿರಬಹುದು. ಆದರೆ 2012, 2013ರಲ್ಲಿ ಈ ಪರೀಕ್ಷೆ ನಡೆಸಲು ಸಿದಟಛಿತೆ ನಡೆದಿದ್ದರೂ ಹಿಂದಿನ ಯುಪಿಎ ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ, ಮೋದಿ ನೇತೃತ್ವದ ಆಡಳಿತ ಬಂದ ನಂತರ ಯೋಜನೆ ವೇಗ ಪಡೆಯಿತು. ಇದಕ್ಕಾಗಿ ಮೋದಿಯವರ ಸರ್ಕಾರಕ್ಕೂ ಸಾಧನೆಯ ಹಿರಿಮೆ ಸಲ್ಲಬೇಕು ಎಂದು ಹೇಳಿದ್ದಾರೆ. ಮೋದಿಯವರ ಸಮರ್ಥ ನಾಯಕತ್ವದಿಂದ ಇದು ಸಾಧ್ಯವಾಗಿದೆ. ಹಿಂದೆ ವಾಜಪೇಯಿ ಅವರ ಅವಧಿಯಲ್ಲಿ ಪೋಖ್ರಾನ್‌ ಅಣು ಪರೀಕ್ಷೆ ನಡೆದರೆ, ಮೋದಿಯವರ ಆಡಳಿತಾವಧಿಯಲ್ಲಿ ಉಪಗ್ರಹ ನಿಗ್ರಹ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next