Advertisement

ಬಿಡುಗಡೆಯಾಗಲಿಲ್ಲ “ತಾರಕ್‌’ಟ್ರೇಲರ್‌

04:07 PM Sep 22, 2017 | |

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದರ್ಶನ್‌ ಅಭಿನಯದ ಬಹುನಿರೀಕ್ಷಿತ “ತಾರಕ್‌’ ಟೀಸರ್ ನಿನ್ನೆ ಗುರುವಾರ (ಸೆಪ್ಟೆಂಬರ್‌ 21) ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಟ್ರೇಲರ್‌ ಬಿಡುಗಡೆ ಮುಂದಕ್ಕೆ ಹೋಗಿದ್ದು, ಈಗ ಟ್ರೇಲರ್‌ ನಾಳೆ (ಸೆಪ್ಟೆಂಬರ್‌ 23) ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

ಟ್ರೇಲರ್‌ಗಾಗಿ ಕಾದಿದ್ದ ಪ್ರೇಕ್ಷಕರಿಗೆ ಸಾಕಷ್ಟು ನಿರಾಶೆಯಾಗಿದ್ದು, ಈ ಸಂಬಂಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ತಾರಕ್‌’ ಚಿತ್ರವನ್ನು “ಮಿಲನ’ ಪ್ರಕಾಶ್‌ ನಿರ್ದೇಶಿಸಿದ್ದಾರೆ. ಇನ್ನು “ಮೊನಾಲಿಸಾ’ ಮತ್ತು “ಮಿಲನ’ ಚಿತ್ರಗಳನ್ನು ನಿರ್ಮಿಸಿದ್ದ ದುಷ್ಯಂತ್‌, ಈ ಚಿತ್ರವನ್ನು ನಿರ್ಮಿಸಿದ್ದಾರೆ. 65 ದಿನಗಳ ಕಾಲ ಬೆಂಗಳೂರು, ಮಲೇಷ್ಯಾ, ಯೂರೋಪ್‌ನಲ್ಲಿ ಚಿತ್ರದ ಚಿತ್ರೀಕರಣವಾಗಿದೆ.

ಆ ಪೈಕಿ 23 ದಿನಗಳ ಕಾಲ ಯುರೋಪ್‌ನಲ್ಲಿ ಶೂಟಿಂಗ್‌ ಮಾಡಿದೆವು. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ದರ್ಶನ್‌ಗೆ ಸಾನ್ವಿ ಶ್ರೀವಾತ್ಸವ್‌ ಮತ್ತು ಶ್ರುತಿ ಹರಿಹರನ್‌ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ದೇವರಾಜ್‌ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದು, ಎ.ವಿ. ಕೃಷ್ಣಕುಮಾರ್‌ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಜಯಂತ್‌ ಕಾಯ್ಕಿಣಿಯವರು ಹಾಡು ಬರೆದಿದ್ದು, ಇದೇ ಮೊದಲ ಬಾರಿಗೆ ದರ್ಶನ್‌ ಅವರ ಚಿತ್ರವೊಂದಕ್ಕೆ ಅವರು ಸಾಹಿತ್ಯ ರಚಿಸಿರುವುದು ವಿಶೇಷ. ಇನ್ನು ಚಿತ್ರವು ಇದೇ ತಿಂಗಳ 29ರಂದು ಸಂತೋಷ್‌ ಮತ್ತು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next