Advertisement

ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಲ್ಲ: ನಡಹಳ್ಳಿ

05:55 PM Aug 13, 2021 | Team Udayavani |

ಮುದ್ದೇಬಿಹಾಳ: ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕಾರಣ ಸೀಮಿತಗೊಳಿಸುತ್ತೇನೆ. ಉಳಿದ ಎಲ್ಲ ದಿನಗಳಂದು ಪಕ್ಷಾತೀತವಾಗಿ ಜನರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸುತ್ತೇನೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ, ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ಶಿರೋಳ, ಸರೂರು, ಸರೂರು ತಾಂಡಾ, ಕವಡಿಮಟ್ಟಿ, ಅರಸನಾಳ, ಹಿರೇಮುರಾಳ, ಜಂಗಮುರಾಳ ಗ್ರಾಮಗಳಲ್ಲಿ ಅ ಧಿಕಾರಿಗಳ ತಂಡದೊಂದಿಗೆ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳ ಪರಿಶೀಲಿಸಲು ಗುರುವಾರ ಭೇಟಿ ನೀಡಿ ಆಯಾ ಗ್ರಾಮಗಳ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಎರಡೂ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೆರೆ ಕಾಲುವೆ ನೀರಿನಿಂದ ತುಂಬಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಈಗಾಗಲೇ ಕ್ರಮ ಕೈಗೊಂಡ ಪರಿಣಾಮ ಎರಡೂ ಗ್ರಾಪಂ ವ್ಯಾಪ್ತಿಯ ರೈತರ ಜಮೀನಿಗೆ ಸಾಕಷ್ಟು ಅನುಕೂಲವಾಗಿದೆ. ಆ ಭಾಗದ ನೀರಿನ ಸಮಸ್ಯೆ ಹೆಚ್ಚು ಕಡಿಮೆ ಬಗೆಹರಿದಂತಾಗಿದೆ. ಇದೆಲ್ಲವೂ ಜನತೆಯ ಸಹಕಾರದಿಂದಲೇ ಸಾಧ್ಯವಾಗಿದೆ ಎಂದರು.

ಹಿರೇಮುರಾಳದಲ್ಲಿ ವಿದ್ಯುತ್‌ ಸ್ಟೇಷನ್‌ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದು ಕಾಮಗಾರಿ ಭರದಿಂದ ಸಾಗಿದೆ. ಇದರಿಂದಾಗಿ ಆ ಭಾಗದ ಜನರ, ರೈತರ ಬಹುದಿನಗಳ ಬೇಡಿಕೆಯಾಗಿದ್ದ ಗುಣಮಟ್ಟದ ವಿದ್ಯುತ್‌ ಪೂರೈಕೆ ಶೀಘ್ರ ಈಡೇರಲಿದೆ. ಇಂಥ ವಿದ್ಯುತ್‌ ಸ್ಟೇಷನ್‌ಗಳು ತಾಲೂಕಿನ 4-5 ಭಾಗಗಳಲ್ಲಿ ಸ್ಥಾಪನೆಗೊಂಡು ಒಟ್ಟಾರೆ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ವಿದ್ಯುತ್‌ ಸಮಸ್ಯೆ ಬಗೆಹರಿಯುವ ಕಾಲ ಸನ್ನಿಹಿತವಾಗಿದೆ ಎಂದರು.

ಪ್ರತಿ ಗ್ರಾಮದಲ್ಲಿ ಜನರಲ್‌ ಫಂಡ್‌ ಅಡಿ ಕೆಬಿಜೆಎನ್ನೆಲ್‌ನಿಂದ ಮೂಲ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಆಗಿದೆ. ಆ ಅನುದಾನ ಬಳಸಲು ಅಧಿ ಕಾರಿಗಳ ತಂಡದೊಂದಿಗೆ ಓಣಿ ಓಣಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಂದಲೇ ಮಾಹಿತಿ ಪಡೆಯುತ್ತಿದ್ದೇನೆ. ಸಾಮೂಹಿಕ ಬೇಡಿಕೆ ದಾಖಲಿಸಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವೆ. ಹಳ್ಳಿಗಳಲ್ಲಿ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾಮಗಾರಿಗೆ ಜನರು ಸಹಕರಿಸಬೇಕು ಎಂದರು.

Advertisement

ಸರೂರು ಗ್ರಾಮ ಹಾಲುಮತ ಸಮಾಜದ ಮೂಲ ಗುರುಪೀಠ ಹೊಂದಿದೆ. ಈ ಗ್ರಾಮದ ಆದ್ಯತೆ ಮೇರೆಗೆ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಿದ್ದೇನೆ. ಅದರ ಮೊದಲ ಹಂತವಾಗಿ ಹಲವು ಕಾಮಗಾರಿಗಳು ಇಲ್ಲಿ ನಡೆದಿವೆ. ಇನ್ನೂ ಹೆಚ್ಚಿನ ಕಾಮಗಾರಿಗಳು ಇಲ್ಲಿ ಆಗಬೇಕಿವೆ. ಶ್ರೀ ರೇವಣಸಿದ್ದೇಶ್ವರರ ಆಶೀರ್ವಾದ ನನ್ನ ಮೇಲಿದ್ದು, ಶೀಗ್ರ ಇಲ್ಲಿ ಅಭಿವೃದ್ಧಿ ಕಾಣಲಿದೆ ಎಂದರು.

ಎಲ್ಲ ಕಾರ್ಯಕ್ರಮಗಳಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಕವಡಿಮಟ್ಟಿ ಗ್ರಾಪಂ ಅಧ್ಯಕ್ಷ ಸಿದ್ರಾಮಯ್ಯ ಗುರುವಿನ್‌, ಹಿರೇಮುರಾಳ ಗ್ರಾಪಂ ಅಧ್ಯಕ್ಷೆ ರೇಣುಕಾ ನಾಗಾವಿ, ಉಪಾಧ್ಯಕ್ಷ ಮಾರುತಿ ಭೋವೇರ, ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಮಂಡಳಿ ಸದಸ್ಯ ಎಂ.ಎಸ್‌. ಪಾಟೀಲ, ಬಸವರಾಜ ಗುಳಬಾಳ, ಅಪ್ಪುಗೌಡ ಮೈಲೇಶ್ವರ, ಮುತ್ತಣ್ಣ ಹುಂಡೇಕಾರ, ಕೆಬಿಜೆಎನ್ನೆಲ್‌ ಎಇಇ ಎನ್‌.ಬಿ. ಮಸೂತಿ, ಪುರಸಭೆ ಸದಸ್ಯರಾದ ಬಸವರಾಜ ಮುರಾಳ, ಹಣಮಂತ್ರಾಯ ದೇವರಳ್ಳಿ, ಪಿಡಿಒ ಪಿ.ಎಸ್‌. ಕಸನಕ್ಕಿ, ಶಾಸಕರ ಆಪ್ತ ಸಹಾಯಕ ಶಿವಾನಂದ ಮೂಲಿಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next