Advertisement
ಹೌದು, ಆಶ್ಚರ್ಯವಾದರೂ ಸತ್ಯ. ಜೈನ್ , ಗುಜರಾತಿ, ಸಿಂಧಿ ಸಮುದಾಯದಲ್ಲಿ ಇನ್ನು ಮುಂದೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡುವಂತಿಲ್ಲ. ಮಾತ್ರವಲ್ಲದೆ ಮಧ್ಯಪ್ರದೇಶ ರಾಜಧಾನಿಯಲ್ಲಿ ಈ ಸಮುದಾಯದ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿಯನ್ನು ಕೂಡ ಮಾಡುವಂತಿಲ್ಲ. ಮೂರು ಸಮುದಾಯದ ಮುಖ್ಯಸ್ಥರು ಈ ಆದೇಶವನ್ನು ಹೊರಡಿಸಿದ್ದು, ಆಜ್ಞೆಯನ್ನು ಉಲ್ಲಂಘಿಸಿದವರನ್ನು ಬಹಿಷ್ಕರಿಸಲಾಗುವುದು ಎಂದಿದ್ದಾರೆ. ಮಾತ್ರವಲ್ಲದೆ ಮದುವೆ ಕಾರ್ಯಕ್ರಮಗಳಲ್ಲಿ ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರರನ್ನು ನೇಮಿಸಿಕೊಳ್ಳುವುದಕ್ಕೆ ಹಾಗೂ ಮದುವೆ ಮೆರವಣಿಗೆಗಳಲ್ಲಿ ನೃತ್ಯಗಳಿಗೆ ಕುಟುಂಬದ ಮಹಿಳಾ ಸದಸ್ಯರನ್ನು ಬಳಸಿಕೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ.
Related Articles
Advertisement
”ವಿವಾಹ ಪೂರ್ವ ಚಿತ್ರೀಕರಣ ನಮ್ಮ ಸಂಪ್ರದಾಯವೇ ಅಲ್ಲ, ಮಹಿಳೆಯರ ನೃತ್ಯಕ್ಕೆ ಪುರುಷ ತರಬೇತುದಾರನ ನೇಮಕವು ಅಸಭ್ಯತೆಗೆ ಕಾರಣವಾಗುವ ಹಿನ್ನೆಲೆಯಲ್ಲಿಇದನ್ನು ನಿಷೇಧಿಸುವಂತೆ ಧಾರ್ಮಿಕ ಮುಖಂಡರು ಮಾರ್ಗದರ್ಶನ ಮಾಡಿದ್ದರು. ಅದರಂತೆ ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ಭೋಪಾಲ್ ಜೈನ ಸಮಾಜದ ಪ್ರಮೋದ್ ಹಿಮಾಂಶು ಜೈನ್ ಹೇಳಿದ್ದಾರೆ.
ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ ಶರ್ಮಾ ಈ ಕ್ರಮವನ್ನು ಬೆಂಬಲಿಸಿದ್ದು ಪ್ರಿ ವೆಡ್ಡಿಂಗ್ ಶೂಟ್ ನಮ್ಮ ಸಂಸ್ಕೃತಿಯಲ್ಲ. ಇಂದಿನ ಯುವಜನತೆ ಸಾಂಪ್ರದಾಯಿಕ ಸಂಸ್ಕೃತಿಯನ್ನು ಅನುಸರಿದರೆ ಅವರ ದಾಂಪತ್ಯ ಜೀವ ಸಂತೋಷದಾಯಕವಾಗಿ ಮತ್ತು ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.