ನವದೆಹಲಿ:ಇನ್ನಷ್ಟೇ ಬಿಡುಗಡೆಗೊಳ್ಳಬೇಕಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತಮ್ಮ ನೂತನ ಕೃತಿಯಲ್ಲಿ ಭಾರತದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಜಾಗತಿಕ ನಾಯಕರ ಕುರಿತು ಅಭಿಪ್ರಾಯವ್ಯಕ್ತಪಡಿಸಿರುವುದು ಇಲ್ಲಿ ದಾಖಲಾಗಿದೆ.
ಬರಾಕ್ ಒಬಾಮಾ ಅವರ “ಎ ಪ್ರಾಮಿಸ್ಡ್ ಲ್ಯಾಂಡ್” ಕೃತಿಯಲ್ಲಿ “ಜನರು ಸುಂದರ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಮಹಿಳೆಯ ಸೌಂದರ್ಯದ ಬಗ್ಗೆ ಅಲ್ಲ ಎಂದು ಉಲ್ಲೇಖಿಸಿದ್ದಾರೆ.
ಒಬಾಮಾ ಅವರ ಪುಸ್ತಕದ ಬಗ್ಗೆ ವಿಮರ್ಶಾ ಲೇಖನ ಪ್ರಕಟಿಸಿರುವ ದ ನ್ಯೂಯಾರ್ಕ್ ಟೈಮ್ಸ್, ನಾವು ತುಂಬಾ ಸುಂದರ ವ್ಯಕ್ತಿಗಳಾದ ಚಾರ್ಲಿ ಕ್ರಿಸ್ಟ್ ಮತ್ತು ರಾಹಮ್ ಇಮ್ಯಾನುಯೆಲ್ ಬಗ್ಗೆ ಮಾತನಾಡುತ್ತೇವೆ ವಿನಃ, ಮಹಿಳೆಯ ಸೌಂದರ್ಯದ ಬಗ್ಗೆ ಅಲ್ಲ, ಅದರಲ್ಲಿಯೂ ಒಂದೆರಡು ಉದಾಹರಣೆ (ಸೋನಿಯಾ ಗಾಂಧಿ) ಹೊರತುಪಡಿಸಿ ಎಂದು ತಿಳಿಸಿದೆ.
ರಾಹುಲ್ ಗಾಂಧಿ ಕುರಿತು ಒಬಾಮಾ ಅವರ ದೃಷ್ಟಿಕೋನ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ, ರಾಹುಲ್ ಗಾಂಧಿ ಅಂಜಿಕೆ, ಅಪಕ್ವತೆ ಗುಣ ಹೊಂದಿದ ವ್ಯಕ್ತಿತ್ವ, ರಾಹುಲ್ ಗಾಂಧಿ ಗುಣ ಶಿಕ್ಷಣನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ, ಆದರೆ ವಿಷಯವನ್ನು ಆಳವಾಗಿ ಅಭ್ಯಸಿಸುವ ಮನೋಭಾವ ಮತ್ತು ಉತ್ಸಾಹ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನಿರ್ಭಯ ಸಮಗ್ರತೆಗೆ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಅಮೆರಿಕದ ಮಾಜಿ ರಕ್ಷಣಾ ಸಚಿವ ಬೋಬ್ ಗೇಟ್ಸ್ ನಂತಹ ನಾಯಕರಷ್ಟೇ ಶ್ರಮಿಸಿದ್ದರು ಎಂದು ಒಬಾಮಾ ತಮ್ಮ ಪುಸ್ತಕದಲ್ಲಿ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಲೇಖನ ಉಲ್ಲೇಖಿಸಿದೆ.