Advertisement

ಮೋದಿ, ಬಿಜೆಪಿಯಿಂದಲೇ ದೇಶ ಅಭಿವೃದ್ಧಿಯಾಗಿದ್ದಲ್ಲ; ಎಚ್ ಡಿ ಕುಮಾರಸ್ವಾಮಿ

01:01 PM Feb 25, 2023 | Team Udayavani |

ಚಿಕ್ಕಮಗಳೂರು: ಉಪಚುನಾವಣೆಯಲ್ಲಿ 17 ಸ್ಥಾನಕ್ಕೆ ಹಣ ಖರ್ಚಾಗಿದ್ದು ಜನ ನೋಡಿದ್ದಾರೆ. ಜರ್ನಾಧನ ರೆಡ್ಡಿ ನಾನು ನೋಡಿಕೊಳ್ಳುತ್ತೇವೆ ಅಂದಿದ್ದಾರೆ. ಹಾಗಾದರೆ ಐಡಿ ಇಡಿ ಬಿಟ್ಟು ನೋಡಿಕೊಳ್ಳುವುದೇ? ಶಿವಮೊಗ್ಗ ಕ್ಕೆ ನರೇಂದ್ರ ಮೋದಿ ಕೊಡುಗೆ ಏನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ಜನರು ಭೂಮಿ ನೀಡಿದ್ದಾರೆ. ಅಲ್ಲಿ ಕೆಲವರಿಗೆ ಹಣ ಬಂದಿಲ್ಲ. ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದರು.

ರಾಜ್ಯದಲ್ಲಿ ಚುನಾವಣೆ ತಯಾರಿ ಆರಂಭವಾಗಿದೆ. ನಿನ್ನೆ ಅಧಿವೇಶನ ಅವಧಿ ಮುಕ್ತಾಯವಾಗಿದೆ. ಚುನಾವಣೆ ದಿನಾಂಕ ಘೋಷಣೆ ಆಗುವವರೆಗೂ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನ ಮಾಡಬಹುದು. ಇದು ಚುನಾವಣಾ ಸಮಯದ ಬಜೆಟ್ ಅಷ್ಟೇ. ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಈ ಕೆಲಸ ಮಾಡಿದರೆ ಜನ ಬೆಂಬಲ ಪಡೆಯಬಹುದು ಎಂದರು.

ಕರ್ನಾಟಕದ ರಾಜಕೀಯವೇ ಬೇರೆ, ಕನ್ನಡಿಗರ ಮೆಚ್ವಿಸೋದು ಕಷ್ಟ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ. ಕಳೆದ ಮೂರು ವರ್ಷದ ಸರ್ಕಾರ ಭ್ರಷ್ಟಚಾರದಿಂದ ಕೂಡಿತ್ತಾ.? ಕಾಂಗ್ರೆಸ್ -ಜೆಡಿಎಸ್ ಮೈತ್ತಿ ಸರ್ಕಾರದಲ್ಲಿ ಭ್ರಷ್ಟಚಾರ ಎಂದಿದ್ದಾರೆ. ಸರ್ಕಾರ ತೆಗೆದಾಗ ಯಾವ ಹಣ ಉಪಯೋಗ ಮಾಡಿದ್ರಿ?, ಉಪ ಚುನಾವಣೆ ಹೇಗೆ ನಡೆಯಿತು ಎನ್ನುವುದು ಎಲ್ಲರಿಗೂ ಗೊತ್ತು ಎಂದರು.

ಇದನ್ನೂ ಓದಿ:Watch: ಚಿಕ್ಕೋಡಿ- ಪಂಚಮಹಾಭೂತ ಲೋಕೋತ್ಸವದಲ್ಲಿ ಮಹಿಳೆಯರ ದಂಡು

Advertisement

ವಿಧಾನಸಭೆಯಲ್ಲಿ ಕೆಲ ನಾಯಕರು ಮನಸ್ಸಿನಲ್ಲಿರುವ ವಿಚಾರ ಹೇಳಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಮೊದಲ ಬಾರಿಗೆ ಒಳ್ಳೆಯ ಬೆಳವಣಿಗೆ ಕಂಡಿದ್ದೇವೆ. ಅಂತಿಮ ಭಾಷಣದಲ್ಲಾದರೂ ಮನಬಿಚ್ವಿ ಮಾತನಾಡಬಹುದಿತ್ತು. ನಿನ್ನೆ ಹಲವು ಜನ ನೆನಪಿನ ಬುತ್ತಿ ಬಿಚ್ವಿಟ್ಟಿರುವುದು ಸಂತೋಷ. ಮೊದಲ ಬಾರಿ ನೆನಪನ್ನು ಮೆಲುಕಿ ಹಾಕಿದ್ದಾರೆ ಎಂದರು.

ಬಿಜೆಪಿಯವರು ನೂರು ಸುಳ್ಳು ಹೇಳಿ ಮೂರು ಕೆಲಸ ಮಾಡುತ್ತಾರೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಅಮಿತ್ ಶಾ ಅವರು ಕಳೆದ ಮೂರು ವರ್ಷದ ಬಿಜೆಪಿ ಆಡಳಿತಕ್ಕೆ ಭ್ರಷ್ಟಾಚಾರದ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಟೀಕೆ ಮಾಡಿದರು.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಇದು ನಾಡಿನ ರೈತರು ಕೊಟ್ಟ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ ಇದು ಬಿಜೆಪಿ ಕೊಡುಗೆಯಲ್ಲ. ಬೆಂಗಳೂರು ಮೈಸೂರು ರಸ್ತೆ ನಿರ್ಮಾಣಕ್ಕೆ ರೈತರ ಜೊತೆ ನಾನು 9 ಸಭೆ ಮಾಡಿರುವೆ. ಆ ರಸ್ತೆ ನಿರ್ಮಾಣಕ್ಕೆ ನಾನು ಸಹ ಶ್ರಮ ಪಟ್ಟಿರುವೆ. ಬಿಜೆಪಿಯವರೇ ದೇಶ ಅಭಿವೃದ್ಧಿ ಮಾಡಿದ್ದಾರಾ? ನೆಹರೂ ಕಾಲದಿಂದಲೂ ದೇಶ ಅಭಿವೃದ್ಧಿಯಾಗಿದೆ. ಪ್ರಧಾನಿ ಮೋದಿ ಬಂದ ಮೇಲಷ್ಟೆ ದೇಶ ಅಭಿವೃದ್ದಿಯಾಗಿಲ್ಲ. ನಾವು ಹುಟ್ಟುವ ಮುಂಚೆಯೇ ಅಭಿವೃದ್ದಿಯಾಗಿದೆ. ಗುಜರಾತ್ ಹೇಗೆ ಅಭಿವೃದ್ಧಿಯಾಗಿದೆ ಎಂದು ಹಳ್ಳಿಗಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next