ಬೀಜಿಂಗ್: ಚೀನಾ ತನ್ನ ನೂತನ ನಕ್ಷೆಯಲ್ಲಿ ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯಿ ಚಿನ್ ಪ್ರದೇಶಗಳನ್ನು ಸೇರಿಸಿರುವುದಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದರ ಬೆನ್ನಲ್ಲೇ ಚೀನಾದ ನೂತನ ನಕ್ಷೆ ಕುರಿತು ಫಿಲಿಪ್ಪೀನ್ಸ್, ಮಲೇಷ್ಯಾ, ವಿಯೆಟ್ನಾಂ ಮತ್ತು ತೈವಾನ್ ಸರ್ಕಾರಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಪಶ್ಚಿಮ ಫಿಲಿಪ್ಪಿನ್ ಸಮುದ್ರ ಭಾಗವನ್ನು ಚೀನಾಗೆ ಸೇರಿದ ಪ್ರದೇಶ ಎಂಬಂತೆ ನೂತನ ನಕ್ಷೆಯಲ್ಲಿ ತೋರಿಸಿರುವುದಕ್ಕೆ ಫಿಲಿಪ್ಪೀನ್ಸ್ ಆಕ್ಷೇಪ ವ್ಯಕ್ತಪಡಿಸಿದೆ. ಅದೇ ರೀತಿ ಮಲೇಷ್ಯಾದ ಸಮುದ್ರ ಪ್ರದೇಶವನ್ನು ಚೀನಾ ತನ್ನ ನಕ್ಷೆಯಲ್ಲಿ ಸೇರಿಸಿರುವುದಕ್ಕೆ ಮಲೇಷ್ಯಾ ಸರ್ಕಾರ ಪ್ರತಿಭಟನೆ ದಾಖಲಿಸಿದೆ.
ಇನ್ನೊಂದೆಡೆ, ಹೋಂಗ್ ಸಾ ಮತ್ತು ಟ್ರೂಂಗ್ ಸಾ ದ್ವೀಪಗಳನ್ನು ಸೇರಿಸಿರುವುದಕ್ಕೆ ವಿಯೆಟ್ನಾಂ ಸರ್ಕಾರ ಹಾಗೂ “ತೈವಾನ್ ಸಂಪೂರ್ಣವಾಗಿ ಚೀನಾದ ಭಾಗವಲ್ಲ’ ಎಂದು ತೈವಾನ್ ವಿದೇಶಾಂಗ ಸಚಿವಾಲಯ ಹೇಳಿದ್ದು, ಚೀನಾ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.