Advertisement

ಯುಪಿಎ ಅಧ್ಯಕ್ಷ ಹುದ್ದೆ ಬೇಡ: ಶರದ್‌ ಪವಾರ್‌

08:26 PM Apr 03, 2022 | Team Udayavani |

ಪುಣೆ: ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಅಧ್ಯಕ್ಷರಾಗಬೇಕು ಎಂಬ ಬೇಡಿಕೆಯನ್ನು ಮಾಜಿ ಸಚಿವ ಶರದ್‌ ಪವಾರ್‌ ಭಾನುವಾರ ತಿರಸ್ಕರಿಸಿದ್ದಾರೆ.

Advertisement

ಇತ್ತೀಚೆಗೆ ಮುಕ್ತಾಯಗೊಂಡ ಎನ್‌ಸಿಪಿ ಯುವ ವಿಭಾಗದ ಸಭೆಯಲ್ಲಿ ಈ ಬಗ್ಗೆ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ್ದಕ್ಕೆ ಪವಾರ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ವಿರುದ್ಧದ ಮೈತ್ರಿಕೂಟದ ನೇತೃತ್ವ ವಹಿಸಿಕೊಳ್ಳಲು ಆಸಕ್ತಿ ಇಲ್ಲ. ಆದರೆ, ಈ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಯುಪಿಎ ಅಧ್ಯಕ್ಷ  ಸ್ಥಾನದಲ್ಲಿ ತಮಗೆ ಆಸಕ್ತಿಯೂ ಇಲ್ಲವೆಂದು ಕೊಲ್ಹಾಪುರದಲ್ಲಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಹೋರಾಟದಲ್ಲಿ ಕಾಂಗ್ರೆಸ್‌ ಪಾತ್ರದ ಬಗ್ಗೆ ಕೇಳಿದಾಗ “ದೇಶಾದ್ಯಂತ ಕಾಂಗ್ರೆಸ್‌ಗೆ ಅಸ್ತಿತ್ವ ಇದ್ದರೂ ಅದಕ್ಕೆ ಅಧಿಕಾರವಿಲ್ಲ’ ಎಂದರು

Advertisement

Udayavani is now on Telegram. Click here to join our channel and stay updated with the latest news.

Next