Advertisement
ಮನೆಯೇ ಮೊದಲ ಪಾಠ ಶಾಲೆ ಎನ್ನುವುದು ಹೋಗಿ ಈಗ ಮನೆಯೇ ಪಾಠಶಾಲೆ ಎಂದಾಗಿದೆ. ಆದರೆ ಆನ್‌ಲೈನ್ ಕಲಿಕೆಗೆ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ತೀರಾ ಅನಿವಾರ್ಯ ಎಂಬ ಪರಿಸ್ಥಿತಿ ಬೇಕಿಲ್ಲ. ಇವೆರಡು ಇಲ್ಲದೆಯೂ ಪಾಠ, ಪ್ರವಚನ ನಡೆಸಬಹುದು.
Related Articles
Advertisement
ಮನೆಯೇ ಮೊದಲ ಪಾಠ ಶಾಲೆ ಎನ್ನುವುದು ಹೋಗಿ ಈಗ ಮನೆಯೇ ಪಾಠಶಾಲೆ ಎಂದಾಗಿದೆ. ಆದರೆ ಆನ್‌ಲೈನ್ ಕಲಿಕೆಗೆ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ತೀರಾ ಅನಿವಾರ್ಯ ಎಂಬ ಪರಿಸ್ಥಿತಿ ಬೇಕಿಲ್ಲ. ಇವೆರಡು ಇಲ್ಲದೆಯೂ ಪಾಠ, ಪ್ರವಚನ ನಡೆಸಬಹುದು.
ಕೊಳ್ಳುವ ಸಾಮರ್ಥ್ಯ ಇಲ್ಲ ಎನ್ನುವ ಕಾರಣಕ್ಕಾಗಿ ಪೋಷಕರು ಚಿಂತೆ ಮಾಡುವುದು ಬೇಡ. ವಿದ್ಯಾರ್ಥಿಗೆ ಸ್ಮಾರ್ಟ್ ಫೋನ್ ಕೊಳ್ಳಲಾಗುತ್ತಿಲ್ಲ ಎಂದು ಶಿಕ್ಷಕರು ನಿಂದಿಸುವುದೂ ಸಲ್ಲದು. ಅವರಿವರಲ್ಲಿ ಇದೆ ನನ್ನಲ್ಲಿ ಇಲ್ಲ ಎನ್ನುವ ಕೊರಗು ಮಕ್ಕಳಿಗೂ ಬೇಡ ಎನ್ನುತ್ತಾರೆ ಕುಂದಾಪುರದ ಮನಃಶಾಸ್ತ್ರ ವೈದ್ಯ ಡಾ| ಪ್ರಕಾಶ್ ತೋಳಾರ್. ಆನ್‌ಲೈನ್ ಕಲಿಕೆ ಕುರಿತು ಅವರು ಕೊಡುವ ಅನುಭವದ ಸಲಹೆಗಳು ಹೀಗಿವೆ.
ಬೇರೆಯವರ ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಇದೆ. ತಮ್ಮ ಮಕ್ಕಳಲ್ಲಿ ಇಲ್ಲ. ಕೊಡಿಸುವುದೂ ಕಷ್ಟ ಎಂದು ಹೆತ್ತವರು ಚಿಂತೆಗೆ ಒಳಗಾಗುವ ಅಗತ್ಯವಿಲ್ಲ. ಒತ್ತಡಕ್ಕೂ ಸಿಲುಕಬಾರದು. ಸ್ಮಾರ್ಟ್ ಫೋನ್ ಕೊಂಡುಕೊಳ್ಳಲು ಅಸಾಧ್ಯವಾದರೆ ಅದನ್ನು ಮಕ್ಕಳಿಗೂ ಅರ್ಥವಾಗುವ ಹಾಗೆ ವಿವರಿಸಿ. ಪಾಠ ಪುಸ್ತಕವನ್ನು ಓದಿ ಅಭ್ಯಾಸ ಮುಂದುವರಿಸಲು ತಿಳಿಸಿ. ಅವರ ಸಹಪಾಠಿಯಿಂದ ವಾರಕ್ಕೊಮ್ಮೆ ಪುಸ್ತಕ ತಂದು ಕೊಟ್ಟು ಅದನ್ನು ನೋಡಿ ನೋಟ್ಸ್ ಬರೆಯಲು ತಿಳಿಸಿ. ಪಾಠ ಅರ್ಥ ಮಾಡಿಸಲು ಅಸಾಧ್ಯವಾದರೆ ನೆರೆ ಮನೆಯ ಹಿರಿಯ ಮಕ್ಕಳ ನೆರವು ಕೇಳಿ. ಇದರಿಂದ ಲ್ಯಾಪ್‌ಟಾಪ್, ಮೊಬೈಲ್ ಇಲ್ಲದೆಯೂ ಮಕ್ಕಳ ಪಾಠ ಮುಂದುವರಿಯುತ್ತದೆ.
ಮುಂದೆ ಶಾಲೆಗೆ ಹೋಗಲು ಇದೆ, ಇತರ ಮಕ್ಕಳ ಜತೆ ಬೆರೆಯಲು ಇದೆ, ಶಿಕ್ಷಕರ ಜತೆ ಪ್ರಶ್ನೆಗಳನ್ನು ಕೇಳಲು ಇದೆ, ಪರೀಕ್ಷೆಗಳು ಹಿಂದಿನಂತೆಯೇ ನಡೆಯಲಿವೆ ಎಂದು ಮಕ್ಕಳಲ್ಲಿ ಧೈರ್ಯ ತುಂಬಬೇಕು.
ನೋಟ್ಸ್ ಪ್ರತಿ ತೆಗೆದಿರಿಸಿಫೋನೇ ಇಲ್ಲ ಎಂದಾದರೆ ಸೈಬರ್ ಸೆಂಟರ್‌ಗೆ ತೆರಳಿ ಶಿಕ್ಷಕರು ಕಳುಹಿಸಿಸಿದ್ದನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಬಹುದು. ಅದಕ್ಕೆ ನೋಟ್ಸ್ ಮಾಡಿದರೆ ಶಾಲಾ ಕಲಿಕೆಯಂತೆಯೇ ಸಂಗ್ರಹವಾಗುವ ಪಠ್ಯವಾಗುತ್ತದೆ. ವರ್ಷದುದ್ದಕ್ಕೂ ಅಧ್ಯಯನಕ್ಕೆ ನೆರವಾಗುತ್ತದೆ. ಸಮೂಹ ಅಧ್ಯಯನ
ಒಬ್ಬ ವಿದ್ಯಾರ್ಥಿ ಬಳಿ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಹತ್ತಿರದ ಮನೆಗಳ 5-6 ವಿದ್ಯಾರ್ಥಿಗಳು ಏಕಕಾಲದಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು. ಸಮೂಹ ಅಧ್ಯಯನವೂ ಆಗುತ್ತದೆ, ಮಕ್ಕಳ ಒಡನಾಟ ದೊರೆತಂತೆಯೂ ಆಗುತ್ತದೆ. ಖನ್ನತೆ ಹೋಗಲು ನೆರವಾಗುತ್ತದೆ. ಆಸಕ್ತಿಯೇ ಪ್ರೇರಣೆಯಾಗಲಿ
ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಮಕ್ಕಳು ಹಿಂದುಳಿಯುತ್ತಾರೆ, ಕಲಿಕೆಯಲ್ಲಿ ಬಾಕಿಯಾಗುತ್ತಾರೆ ಎಂದು ಹೆತ್ತವರಾಗಲೀ, ಶಿಕ್ಷಕರಾಗಲೀ ಭಾವಿಸಬಾರದು. ಮಕ್ಕಳ ಕಲಿಕಾ ಆಸಕ್ತಿಯೇ ಅವರನ್ನು ಕಲಿಯಲು ಪ್ರೇರಣೆ ನೀಡುತ್ತದೆ. ಹೆತ್ತವರೇನು ಮಾಡಬೇಕು?
ಸ್ಮಾರ್ಟ್‌ಫೋನ್ ದೊರೆತಾಗ ಮಕ್ಕಳ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುವುದು ಅವಶ್ಯ. ಮೊಬೈಲ್ ಬಳಕೆಗೆ ನಿರ್ದಿಷ್ಟ ಸಮಯವನ್ನು ನಿಗದಿಗೊಳಿಸಬೇಕು. ಬೇರೆ ಯಾವ ಆ್ಯಪ್‌ಗ್ಳನ್ನು ಉಪಯೋಗಿಸುತ್ತಾರೆ, ಏನೇನು ಹುಡುಕಾಟ ನಡೆಸುತ್ತಾರೆ, ಏನೆಲ್ಲ ನೋಡುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಿರಬೇಕು. ಏಕೆಂದರೆ ಇಂಟರ್ನೆಟ್‌ನಲ್ಲಿ ಇದನ್ನು ನೋಡಿ ಎನ್ನುವ ಸಲಹೆಗಳು ಬಂದಾಗ ಮಕ್ಕಳು ಕುತೂಹಲಕ್ಕಾಗಿ ನೋಡಲಾರಂಭಿಸಿ ಚಟವೇ ಆಗಿ ಬಿಡುವ ಅಪಾಯ ಇದೆ. ಮೊಬೈಲ್‌ಗೆ ಪೇರೆನ್ಶಿಯಲ್ ಕಂಟ್ರೋಲ್ ಹಾಕಿದರೆ ಉತ್ತಮ. ನಿರ್ದಿಷ್ಟ ಆ್ಯಪ್‌ಗ್ಳನ್ನು ಮಾತ್ರ ಮಕ್ಕಳು ಉಪಯೋಗಿಸುವಂತೆ, ಹೊಸ ಆ್ಯಪ್ ಡೌನ್‌ಲೋಡ್ ಮಾಡಬೇಕಾದರೆ ಹೆತ್ತವರ ಪರ್ಮಿಶನ್ ಬೇಕಾಗುವಂತೆ ಮಾಡಿದರೆ ಅನುಕೂಲ. ಮಕ್ಕಳ ಮೊಬೈಲ್‌ಗೆ ಲಾಗಿನ್ ಆಗುವಾಗ ಕೂಡ ಹೆತ್ತವರ ಇ-ಮೇಲ್ ಐಡಿ ನೀಡಿದರೂ ನಿಯಂತ್ರಣ ಹೆತ್ತವರ ಕೈಲಿರುತ್ತದೆ. ಒಂದು ವೇಳೆ ಹೆತ್ತವರಲ್ಲಿ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಆ ಬಗ್ಗೆ ಹೆಚ್ಚು ಚಿಂತಿಸಬೇಡಿ. ಆ ಬಗ್ಗೆ ಮಕ್ಕಳ ಎದುರು ಕೊರಗಲೇ ಬೇಡಿ. ಮಕ್ಕಳಿಗೆ
ವಿಷಯವನ್ನು ಮನದಟ್ಟು ಮಾಡಿ. ಪರ್ಯಾಯವಾಗಿ ಪಾಠ ಮಾಡುವ ಅಥವಾ ಮಾಡಿಸುವ ಕುರಿತು ಚಿಂತಿಸಿ. ಈ ಮೊದಲೇ ತಿಳಿಸಿದಂತೆ ಹಿರಿಯ ವಿದ್ಯಾರ್ಥಿಗಳ ಅಥವಾ ಮಕ್ಕಳ ಸಹಪಾಠಿಗಳ ನೆರವು ಕೇಳಿ. ಈಗ ಯಾರೂ ಇಲ್ಲ ಎಂದು ಹೇಳುವುದಿಲ್ಲ. ಅತಿಯಾದ ಮೊಬೈಲ್ ಬಳಕೆ ಕಾಯಿಲೆಯಾಗಿ ಮಾರ್ಪಾಟಾಗುತ್ತಿದ್ದು ಚಿಕಿತ್ಸೆಗೆ ಅನೇಕರು ಮಕ್ಕಳನ್ನು ಕರೆತರುತ್ತಿದ್ದಾರೆ. ಮೊಬೈಲ್ ಬಳಕೆ ಕಾಯಿಲೆಯಿಂದ (ಮೊಬೈಲ್ ಅಡಿಕ್ಷನ್) ಹೊರಬರುವುದು ತೀರಾ ಕಷ್ಟವೂ ಹೌದು. ಆದ್ದರಿಂದ ಮೊಬೈಲ್ ಬಳಕೆಗೆ ಸಮಯ ಮಿತಿ, ಶಾಲಾ ನಿರ್ದಿಷ್ಟ ಚಟುವಟಿಕೆಗಷ್ಟೇ ಮೊಬೈಲ್ ಬಳಕೆ ಕುರಿತು ಮಕ್ಕಳಿಗೆ ತಿಳಿಹೇಳಬೇಕು. ಮೊಬೈಲ್ ಹೆಚ್ಚು ವೀಕ್ಷಣೆ ಕಣ್ಣು ಹಾಗೂ ಮನಸ್ಸಿಗೆ ಹಾನಿಯುಂಟು ಮಾಡುತ್ತದೆ.
– ಡಾ| ಪ್ರಕಾಶ್ ತೋಳಾರ್, ಮನಃಶಾಸ್ತ್ರ ವೈದ್ಯರು, ಕುಂದಾಪುರ