ಮುಂಬೈ: ಕ್ರಿಕೆಟಿಗರು ಜಿಮ್ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಕಳೆಯುವ ಭಾರತೀಯ ಕ್ರಿಕೆಟ್ ತಂಡದಲ್ಲಿನ ತರಬೇತಿ ವಿಧಾನದ ಬಗ್ಗೆ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟಿಗರ ಜಿಮ್ ಸೆಷನ್ ಗಳ ಭಾಗವಾಗಿರುವ ಕೆಲವು ವರ್ಕೌಟ್‌ಗಳು ಅವರಿಗೆ ಆಗಾಗ ಉಂಟಾಗುವ ಗಾಯಗಳ ಹಿಂದಿನ ನಿಜವಾದ ಕಾರಣ ಎಂದು ಸೆಹವಾಗ್ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ದಿನಗಳಲ್ಲಿ, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಎಂಎಸ್ ಧೋನಿ ಅಥವಾ ಯುವರಾಜ್ ಸಿಂಗ್ ಅವರು ಬೆನ್ನು, ಮಂಡಿರಜ್ಜು ಅಥವಾ ಭುಜ ಗಾಯಗಳಿಂದಾಗಿ ಹೊರಗೆ ಉಳಿಯುತ್ತಿರಲ್ಲ” ಎಂದು ಸೆಹವಾಗ್ ಹೇಳಿದ್ದಾರೆ.
ಇದನ್ನೂ ಓದಿ:ಬಾಕ್ಸ್ ಆಫೀಸ್ ʼಕಬ್ಜʼ ಮಾಡಿದ್ರಾ ಉಪ್ಪಿ? : ಮೊದಲ ದಿನ ಸಿನಿಮಾ ಗಳಿಸಿದ್ದೆಷ್ಟು?
ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣ ಕಳೆದ 8 ತಿಂಗಳಿಂದ ಗೈರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ತಮ್ಮ ಬೆನ್ನಿನ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಕ್ರಿಕೆಟಿಗರು ಮೊಣಕಾಲು ಗಾಯದ ಬಗ್ಗೆ ದೂರು ನೀಡಿದ್ದರು. ಭಾರತೀಯ ತಂಡದ ತರಬೇತುದಾರರು ಎಲ್ಲಾ ಕ್ರಿಕೆಟಿಗರಿಗೆ ಒಂದೇ ರೀತಿಯ ವ್ಯಾಯಾಮ ನಿಯಮವನ್ನು ಅನ್ವಯಿಸುವುದರಿಂದ ಗಾಯಗೊಳ್ಳುತ್ತಿದ್ದಾರೆ ಎಂದು ಸೆಹವಾಗ್ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ದಿನಗಳಲ್ಲಿ, ಯಾವುದೇ ಕ್ರಿಕೆಟಿಗರು ಭಾರ ಎತ್ತುವ ಅಭ್ಯಾಸ ಮಾಡುತ್ತಿರಲಿಲ್ಲ. ಆದರೆ ಉತ್ತಮ ಪ್ರದರ್ಶನ ನೀಡಲು ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಮ್ಯಾಚ್-ಫಿಟ್ನೆಸ್ ಉಳಿಸಿಕೊಳ್ಳಲು ಸಮರ್ಥರಾಗಿದ್ದರು ಎಂದು ಸೆಹವಾಗ್ ಹೇಳಿದರು.
“ಇದು ವಿರಾಟ್ ಕೊಹ್ಲಿ ಫಂಡಾ ಆಗಿರಬಹುದು. ಆದರೆ ಎಲ್ಲರೂ ವಿರಾಟ್ ಕೊಹ್ಲಿ ಅಲ್ಲ. ನಿಮ್ಮ ಸ್ವಂತ ದೇಹವನ್ನು ಆಧರಿಸಿ ನೀವು ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಬೇಕು” ಎಂದು ಅವರು ಹೇಳಿದರು.