Advertisement
ಗ್ರಾಮೀಣ ಪ್ರದೇಶದ ರೋಗಿಗಳಿಗೆ ಆಶ್ರಯ ತಾಣವಾಗಿರುವ ಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಸಾಕಷ್ಟು ದಾದಿಯರಿಲ್ಲದಿರುವುದರಿಂದ ಹಲವು ಸಮಸ್ಯೆಗಳು ಎದುರಾಗಿವೆೆ. ಬದಿಯಡ್ಕ ಪ್ರದೇಶದಲ್ಲೂ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದೆ. ರೋಗಿಗಳನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲು ಇಲ್ಲಿ ಸಾಧ್ಯವಾಗುತ್ತಿಲ್ಲ.
Related Articles
ಬದಿಯಡ್ಕ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಸಹಿತ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಹೆಚ್ಚಿನ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು, ಕ್ಲಿನಿಕ್‌ಗಳನ್ನು ಅವಲಂಬಿಸಿದ್ದಾರೆ. ಬದಿಯಡ್ಕದಲ್ಲಿ ಡೆಂಗ್ಯೂ ಜ್ವರವೂ ಕಾಣಿಸಿಕೊಂಡಿದೆ. ಪ್ರತೀ ದಿನ 100 ರಿಂದ 150 ರಷ್ಟು ರೋಗಿಗಳು ಕಮ್ಯೂನಿಟಿ ಹೆಲ್ತ್ ಸೆಂಟರ್‌ಗೆ ಆಗಮಿಸುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಜ್ವರ ಪೀಡಿತರು. ಜ್ವರ ತೀವ್ರತೆ ಹೆಚ್ಚಿದ್ದರೆ ಇಂತಹ ರೋಗಿಗಳನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತಿದೆ. ಇಲ್ಲಿ ಪ್ರಸ್ತುತ ಒಬ್ಬರು ಹೆಡ್ ನರ್ಸ್ ಸಹಿತ ನಾಲ್ವರು ನರ್ಸ್‌ಗಳಿದ್ದಾರೆ.
Advertisement
ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಆಪರೇಶನ್ ಥಿಯೇಟರ್, 30 ಹಾಸಿಗೆಗಳು ಇರುವ ಎಲ್ಲಾ ವಿಧದ ಸೌಕರ್ಯಗಳಿವೆ. ಒಂದು ವಾರದ ಹಿಂದೆ ಇಲ್ಲಿಗೆ ವೈದ್ಯರ ನೇಮಕಾತಿಯೂ ನಡೆದಿದೆ. ಆದರೆ ಅದೇ ಸಂದರ್ಭದಲ್ಲಿ ದಾದಿಯರ ಕೊರತೆ ಕಂಡು ಬಂದಿದೆ. ಕಾಸರಗೋಡು ಬ್ಲಾಕ್ ಪಂಚಾಯತ್‌ನ ಅಧೀನದಲ್ಲಿ ಈ ಕಮ್ಯೂನಿಟಿ ಹೆಲ್ತ್ ಸೆಂಟರ್ ಕಾರ್ಯಾಚರಿಸುತ್ತಿದ್ದು, ಬ್ಲಾಕ್ ಪಂಚಾಯತ್ ಅಧ್ಯಕ್ಷರು ಜೆಯರ್‌ವೆುàನ್ ಆಗಿರುವ ಕಮ್ಯೂನಿಟಿ ಹೆಲ್ತ್ ಸೆಂಟರ್ ಅಭಿವೃದ್ಧಿ ಸಮಿತಿಯಿದ್ದರೂ ಕಳೆದ ಮೂರು ತಿಂಗಳಿಂದ ಈ ಸಮಿತಿ ಸಭೆ ಸೇರಿಲ್ಲ ಎಂಬುದಾಗಿ ವ್ಯಾಪಕ ಆರೋಪ ಕೇಳಿ ಬರುತ್ತಿದೆ.
ಒಳರೋಗಿ ಚಿಕಿತ್ಸಾ ಸೌಕರ್ಯಕ್ಕೆ ಆಗ್ರಹಬದಿಯಡ್ಕ ಕಮ್ಯೂನಿಟಿ ಹೆಲ್ತ್ ಸೆಂಟರ್‌ನಲ್ಲಿ ಒಳರೋಗಿ ಚಿಕಿತ್ಸಾ ಸೌಕರ್ಯ ಒದಗಿಸಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಆಪರೇಶನ್ ಥಿಯೇಟರ್, 30 ಹಾಸಿಗೆಗಳು ಸಹಿತ ಎಲ್ಲ ಸೌಕರ್ಯಗಳೂ ಬದಿಯಡ್ಕ ಸಿಎಚ್‌ಸಿಯಲ್ಲಿವೆ. ಅತ್ಯಾಧುನಿಕ ರೀತಿಯ ಪರಿಶೋಧನಾ ಸಲಕರಣೆಗಳೂ ಇಲ್ಲಿವೆ. ಆದರೆ ವೈದ್ಯರುಗಳ ಕೊರತೆ, ದಾದಿಯರ ಕೊರತೆ ಹಾಗೂ ಸಿಬಂದಿ ಗಳಿಲ್ಲದಿರುವುದು ಊಟಕ್ಕಿಲ್ಲದ ಉಪ್ಪಿನ ಕಾಯಿ ಯಂತಾಗಿದೆ. ಈ ಬಗ್ಗೆ ಅಧಿಕೃತರು ಮೌನ ವಹಿಸಿದರೆ ಬಿಜೆಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.