Advertisement

ದುರುದ್ದೇಶದಿಂದ ಸಾಮೂಹಿಕ ವಿವಾಹ ಮಾಡುತ್ತಿಲ್ಲ

09:13 PM Feb 26, 2020 | Lakshmi GovindaRaj |

ಬಾಗೇಪಲ್ಲಿ: ಮಾ.6ರಂದು ದೇವರಗುಡಿಪಲ್ಲಿಯಲ್ಲಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರಗೆ ಮದುವೆ ವಯಸ್ಸಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಹೇಳಿದರು. ಬುಧವಾರ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಮಾ.6ರಂದು ಮದುವೆಯಾಗಲಿರುವ ನೂತನ ವಧು, ವರರಿಗೆ ಬಟ್ಟೆ ಮತ್ತಿತರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

Advertisement

ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಲ್ಲ: ಯಾವುದೇ ಕಾರಣಕ್ಕೂ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆಗಳನ್ನು ಮಾಡುವುದಿಲ್ಲ. ನೂತನ ವಧು-ವರರಗೆ ಮದುವೆ ವಯಸ್ಸಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಮದುವೆ ವಯಸ್ಸು ಆಗಿದೆ ಎಂದು ವರದಿ ನೀಡಿದ ನಂತರ ನೋಂದಣಿ ಕಚೇರಿಯಲ್ಲಿ ಕಾನೂನು ಬದ್ಧವಾಗಿ ಮದುವೆಯಾಗಬೇಕು. ಇಂಥ ನೂತನ ವಧು-ವರರಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಅವಕಾಶ ಕಲ್ಪಿಸಲಾಗುವುದು ಎಂದರು.

ಸೀಮೆ ಹಸು ವಿತರಣೆ: ಮದುವೆಯಾದ ಪ್ರತಿ ಜೋಡಿಗೆ ಒಂದು ಉಚಿತ ಸೀಮೆ ಹಸು ನೀಡಲಾಗುವುದು. ಸೀಮೆ ಹಸು ಬೇಡ ಎನ್ನುವ ವಧು, ವರರ ಸ್ವಂತ ಜಮೀನಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಿಸಲಾಗುದು ಇದು ಬೇಡ ಎನ್ನುವವರಿಗೆ 2 ಎಕರೆ ಜಮೀನನ್ನು ಉಚಿತ ಖರೀದಿ ಮಾಡಿ ನೀಡಲಾಗುವುದು ಎಂದು ತಿಳಿಸಿದರು.

ಸ್ವಂತ ಹಣದಿಂದ ಮದುವೆ: ಸೀಮೆ ಹಸು ಖರೀದಿ ಮಾಡುವ ವಧು, ವರರಿಗೆ ಮುಂಗಡವಾಗಿ 5 ಸಾವಿರ ರೂ. ವಿತರಣೆ ಮಾಡಲಾಗುವುದು. ಹಸು ಖರೀದಿ ಮಾಡುವುದರಿಂದ ನೂತನ ದಂಪತಿಗಳಿಗೆ ಕುಟುಂಬ ಪೋಷಣೆಗೆ ಅನುಕೂಲವಾಗಲಿದೆ. ನಾನು ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ಸಾಮೂಹಿಕ ವಿವಾಹಗಳನ್ನು ಮಾಡುತ್ತಿಲ್ಲ. ನಾನು ಪ್ರಾಮಾಣಿಕವಾಗಿ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದರೆ ನನ್ನ ಪರವಾಗಿ ಮತ ಚಲಾಯಿಸಿ. ಈ ಮದುವೆಗಳನ್ನು ನನ್ನ ಸಂಪಾದನೆಯ ಸ್ವಂತ ಖರ್ಚಿನಿಂದ ಮಾಡುತ್ತಿದ್ದೇನೆ ಬೇರೆ ಕಡೆಗಳಿಂದ ಹಣ ತಂದು ಮದುವೆಗಳನ್ನು ಮಾಡುತ್ತಿಲ್ಲ ಎಂದರು.

8 ಸಾವಿರ ಬಡ ಹೆಣ್ಣು ಮಕ್ಕಳ ಮದುವೆ: ಜಿಪಂ ಸದಸ್ಯ ಬೂರಮಡುಗು ನರಸಿಂಹಪ್ಪ ಮಾತನಾಡಿ, ಬಾಗೇಪಲ್ಲಿ-ಗುಡಿಬಂಡೆ ತಾಲೂಕುಗಳ ಬಡ ಜನರ ಸಂಕಷ್ಟಗಳಿಗೆ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ನೆರವಾಗುತ್ತಿದ್ದಾರೆ. 19 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 8 ಸಾವಿರ ಬಡ ಹೆಣ್ಣು ಮಕ್ಕಳ ಮದುವೆ ಮಾಡಿಸಿದ್ದಾರೆ. ಸುಬ್ಬಾರೆಡ್ಡಿ ವರ್ಷದಲ್ಲಿ 300 ದಿನಗಳ ಕಾಲ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿದ್ದುಕೊಂಡು ಜನರ ಕಷ್ಟಗಳಿಗೆ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.

Advertisement

102 ನೂತನ ವಧು, ವರರಿಗೆ ಬಟ್ಟೆ, ಕಾಲ್ಗುಂರ ಹಾಗೂ 5 ಸಾವಿರ ರೂ. ಮುಂಗಡ ಹಣ ಹಸು ಖರೀದಿಗೆ ವಿತರಣೆ ಮಾಡಲಾಯಿತು. ಶಾಸಕ ಸುಬ್ಬಾರೆಡ್ಡಿ ಪತ್ನಿ ಶೀಲಾ, ಸಹೋದರ ಎಸ್‌.ಎನ್‌.ಸೂರ್ಯನಾರಾಯಣರೆಡ್ಡಿ, ತಾಪಂ ಅಧ್ಯಕ್ಷ ಕೆ.ಆರ್‌.ನರೇಂದ್ರಬಾಬು, ಸಿಪಿಐ ನಯಾಜ್‌ಬೇಗ್‌, ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಶ್ರೀನಿವಾಸರೆಡ್ಡಿ, ನಿರ್ದೇಶಕರಾದ ಪ್ರಭಾಕರ ರೆಡ್ಡಿ, ಎ.ಆನಂದ್‌, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್‌.ಹನುಮಂತರೆಡ್ಡಿ, ಬಿಳ್ಳೂರು ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next