Advertisement

ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ

12:35 AM Jul 29, 2019 | Team Udayavani |

ನಾಗಮಂಗಲ: ‘ನಾನು ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯವರೆಗೂ ಯಾವುದೇ ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ’ ಎಂದು ಮಾಜಿ ಸಚಿವ ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ನವರು ಬಹುಮತ ಸಾಬೀತು ಪಡಿಸುವ ಮೂಲಕ ಸೋಮವಾರ ವಿಶ್ವಾಸಮತವನ್ನು ಗೆಲ್ಲವುದು ನೂರಕ್ಕೆ ನೂರು ಸತ್ಯ ಎಂದರು. ರಾಜಕಾರಣ ದಲ್ಲಿ ಅಧಿಕಾರಗಳು ಸಿಗುವುದೇ ವಿರಳ. ಅದರಲ್ಲೂ ಸಂಪೂರ್ಣ ಅವಧಿ ಅಧಿಕಾರ ನಡೆಸುವ ಎಲ್ಲಾ ಅವಕಾಶಗಳಿದ್ದರೂ ಸುಲಭವಾಗಿ ಬಿಟ್ಟು ಬರುವಂತಹ ಕುಟುಂಬ ಯಾವುದಾದರೂ ಇದ್ದರೆ ಅದು ದೇವೇಗೌಡರ ಕುಟುಂಬ.

ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಇದೇ ರೀತಿ ಯಾಗಿದೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗಲೂ ಹೀಗೆಯೇ ಆಗಿತ್ತು. ಈಗಲೂ ಹೀಗೆಯೇ ಆಗಿದೆ. ಅದು ದೈವ ತೀರ್ಮಾನವೋ ಅಥವಾ ಅವರೇ ಹೊರ ಬರುತ್ತಾರೋ ಗೊತ್ತಿಲ್ಲ. ಕುಮಾರಸ್ವಾಮಿಯವರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಉತ್ತಮ ಆಡಳಿತ ನೀಡಿದ್ದಾರೆ. ಇನ್ನಷ್ಟು ದಿನ ಅವರು ಆಡಳಿತ ನಡೆಸಿದ್ದರೆ ಸಂತೋಷಪಡುತ್ತಿದ್ದೆ. ನಾವು ಎಲ್ಲಿಯೂ ಸರ್ಕಾರ ಬೀಳಲಿ ಎಂದು ಹೇಳಿಲ್ಲ. ಸರ್ಕಾರದಿಂದಾಗುತ್ತಿದ್ದ ಲೋಪಗಳನ್ನು ತಿಳಿಸುತ್ತಿದ್ದೆ. ಸರ್ಕಾರ ಬೀಳುವುದರಿಂದ ನಮಗೇನೂ ಖುಷಿಯಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next