Advertisement

ಬಗೆಹರಿಯದ ಸೈಕ್ಲಿಂಗ್‌ ಕೋಚ್‌ ಗೊಂದಲ 

03:35 PM Sep 30, 2018 | |

ಬಾಗಲಕೋಟೆ: ನವನಗರದ ಯುವಜನ ಸೇವಾ ಕ್ರೀಡಾ ಇಲಾಖೆಯಲ್ಲಿ ಸೈಕ್ಲಿಂಗ್‌ ಕೋಚ್‌ ವಿಷಯದಲ್ಲಿ ಗೊಂದಲ ಮುಂದುವರಿದಿದೆ. ಸೈಕ್ಲಿಂಗ್‌ ಕಲಿಯುವ ಮಕ್ಕಳು ಮತ್ತು ಕೋಚ್‌ ಮಧ್ಯೆ ಹೊಂದಾಣಿಕೆ ಇಲ್ಲದಂತಾಗಿದೆ. ಇದರಿಂದ ಸೈಕ್ಲಿಂಗ್‌ ಬಿಟ್ಟು ಪಾಲಕರ ಜೊತೆ ಮಕ್ಕಳು ಹೊರಟು ಹೋಗಲು ಮುಂದಾಗಿದ್ದಾರೆ.

Advertisement

ನವನಗರದ ಯುವಜನ ಸೇವಾ ಕ್ರೀಡಾ ಇಲಾಖೆಯಲ್ಲಿ 26 ವಿದ್ಯಾರ್ಥಿಗಳು ಸೈಕ್ಲಿಂಗ್‌ ಕಲಿಯುತ್ತಿದ್ದಾರೆ. ಈ ಹಿಂದೆ ಮಕ್ಕಳಿಗೆ ಸೈಕ್ಲಿಂಗ್‌ ಕೋಚ್‌ ನೀಡುತ್ತಿದ್ದ ಅನಿತಾ ನಿಂಬರಗಿ ಮತ್ತೆ ಕೋಚ್‌ ಹುದ್ದೆಗೆ ಬಂದಿರುವುದೇ ಗೊಂದಲಕ್ಕೆ ಕಾರಣವಾಗಿದೆ. ಸೈಕ್ಲಿಂಗ್‌ ಕೋಚ್‌ ಪಡೆದುಕೊಂಡು ಉತ್ತಮ ಸಾಧನೆ ಮಾಡಲು ಬಂದಿದ್ದ ವಿದ್ಯಾರ್ಥಿಗಳು ಇಂದು ಬೇಡವೇ ಬೇಡ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೈಕ್ಲಿಂಗ್‌ ಕೋಚ್‌ ವಿಷಯ ನಮಗೆ ಕಿರಿ-ಕಿರಿಯಾಗುತ್ತದೆ. ಅದಕ್ಕಾಗಿ ನಮಗೆ ಸೈಕ್ಲಿಂಗ್‌ವೇ ಬೇಡ ಎಂದು ಪಾಲಕರ ಜೊತೆ ಹೊರಟು ಹೋಗುತ್ತಿದ್ದಾರೆ.

ಈ ಹಿಂದೆ ಸೈಕ್ಲಿಂಗ್‌ ಕೋಚ್‌ ಆಗಿದ್ದ ಅನಿತಾ ನಿಂಬರಗಿ 15-12-2017ರಂದು ಬಿಡುಗಡೆ ಹೊಂದಿ ಗದಗಕ್ಕೆ ವರ್ಗಾವಣೆಯಾಗಿದ್ದರು. ಸೈಕ್ಲಿಂಗ್‌ ತರಬೇತುದಾರರ ವರ್ಗಾವಣೆಯ ಆದೇಶಕ್ಕೆ ಉಚ್ಚ ನ್ಯಾಯ್ನಾಲಯ ತಾತ್ಕಾಲಿಕ 26-12-2017ರಂದು ತಡೆ ನೀಡಿತ್ತು. ಹೀಗಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿಯೇ ಮುಂದುವರಿಯಬೇಕಾಯಿತು. ಮತ್ತೆ ನವನಗರದ ಕ್ರೀಡಾ ವಸತಿ ನಿಲಯದಲ್ಲಿರುವ ಸೈಕ್ಲಿಂಗ್‌ ಮಕ್ಕಳಿಗೆ ಕೋಚ್‌ ತೆಗೆದುಕೊಳ್ಳುವುದನ್ನು ಆರಂಭಿಸಿದಾಗ ಸೈಕ್ಲಿಂಗ್‌ ಕೋಟ್‌ ಪಡೆಯುವ ಮಕ್ಕಳು ಅನಿತಾ ನಿಂಬರಗಿ ನಮಗೆ ಕೋಚ್‌ ಬೇಡ ಎಂದು ಮೇಲಧಿಕಾರಿಗಳ ಜೊತೆ ಮಾತನಾಡಲು ತಮ್ಮ ಪಾಲಕರನ್ನು ಕರೆಯಸಿದ್ದಾರೆ. ಯುವಜನ ಸೇವಾ ಕ್ರೀಡಾ ಇಲಾಖೆಯ ಪ್ರಬಾರಿ ಉಪ ನಿರ್ದೇಶಕ ಪ್ರಕಾಶ ಸರಶೆಟ್ಟಿ ಸೈಕ್ಲಿಂಗ್‌ ಮಕ್ಕಳ ಪಾಲಕರ ಜೊತೆ ನಡೆಸಿದ ಸಭೆಯಲ್ಲಿ ಹೊಸ ಕೋಚ್‌ ಬಗ್ಗೆ ಚರ್ಚೆ ನಡೆದು ಹೊಂದಾಣಿಕೆ ಆಗದ ಕಾರಣ ಸಂಧಾನ ಸಭೆ ವಿಫಲವಾಗಿದೆ.

ಸಭೆ ವಿಫಲವಾದ ಕಾರಣ ಪಾಲಕರು ತಮ್ಮ ಮಕ್ಕಳು ಕರೆದುಕೊಂಡು ಹೋಗುತ್ತೇವೆ ಎಂದು ಸಭೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸೈಕ್ಲಿಂಗ್‌ ಕೋಚ್‌ ಆಗಿ ಮತ್ತೆ ಅನಿತಾ ನಿಂಬರಗಿ ಅವರನ್ನು ನೇಮಿಸಿದಕ್ಕಾಗಿ ಮಕ್ಕಳ ಪಾಲಕರು ಮೇಲಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಅಭಿಪ್ರಾಯ: ಈಗಿರುವ ಸೈಕ್ಲಿಂಗ್‌ ಕೋಚ್‌ ನಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಸರ್ಕಾರದಿಂದ ಬಂದಂತಹ ಹೊಸ ಸೈಕಲ್‌ಗ‌ಳನ್ನು ನಮಗೆ ನೀಡಿದ್ದಾರೆ. ಉತ್ತಮ ಆಹಾರ ನೀಡುತ್ತಾರೆ. ಅದಕ್ಕಾಗಿ ನಮಗೆ ಅನಿತಾ ನಿಂಬರಗಿ ಬೇಡ. ಅವರು ಹಿಂದೆ‌ ಕೋಚ್‌ ಆಗಿದ್ದಾಗ ನಮಗೆ ನೀಡಬೇಕಾದ ಶೂ ಮತ್ತು ಆಹಾರ ಧಾನ್ಯಗಳನ್ನು ತಮ್ಮ ಮನೆಗೆ ತಗೆದುಕೊಂಡು ಹೋಗುತ್ತಿದ್ದರು. ಅವರು ಮತ್ತೆ ಕೋಚ್‌ ಆಗಿ ಬಂದರೆ ಮತ್ತೆ ಎಲ್ಲವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅದಕ್ಕಾಗಿ ನಮಗೆ ಅವರು ಕೋಚ್‌ ಆಗುವುದು ಬೇಡ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಮತ್ತು ಅವರ ಪಾಲಕರ ಜೊತೆ ಸಭೆ ನಡೆಸಿದ್ದೇನೆ. ಮಕ್ಕಳಿಗೆ ಅನುಕೂಲವಾಗುವಂತೆ ಕೋಚ್‌ ಮಾಡಿ ಎಂದು ನನಗೆ ಹೇಳಿದ್ದಾರೆ. ಈಗಿರುವ 26 ಮಕ್ಕಳಲ್ಲಿ ಮತ್ತೂಬ್ಬ ಕೋಚ್‌ಗೆ 13 ಮಕ್ಕಳು ಮತ್ತು ಅನಿತಾ ನಿಂಬರಗಿ ಅವರಿಗೆ 13 ಮಕ್ಕಳು ನೇಮಿಸಲಾಗಿದೆ. ಒಂದು ವೇಳೆ ಮಕ್ಕಳು ಅನಿತಾ ನಿಂಬರಗಿ ಬೇಡ ಎಂದರೆ ಮೇಲಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡುವೆ.
 ಪ್ರಕಾಶ ಸರಶೆಟ್ಟಿ,
 ಪ್ರಭಾರಿ ಯುವಜನ ಸೇವಾ-ಕ್ರೀಡಾ ಇಲಾಖೆ ಉಪನಿರ್ದೇಶಕ

Advertisement

ಈ ಹಿಂದೆ ನಮ್ಮ ಮಕ್ಕಳಿಗೆ ಅನಿತಾ ನಿಂಬರಗಿ ಕೋಚ್‌ ಆಗಿದ್ದರು. ಆಗ ಅವರು ನಮ್ಮ ಮಕ್ಕಳಿಗೆ ಸಮರ್ಪಕವಾಗಿ ಊಟದ ವ್ಯವಸ್ಥೆ, ಕುಡಿಯಲು ಹಾಲು ಸೇರಿದಂತೆ ಉತ್ತಮ ಆಹಾರ ಕೊಡುತ್ತಿರಲಿಲ್ಲ. ಸರ್ಕಾರ ನೀಡಿದರೂ ಮಕ್ಕಳಿಗೆ ಸರಿಯಾದ ಸಮಯಕ್ಕೆ ನೀಡುತ್ತಿರಲಿಲ್ಲ. ಅದಕ್ಕಾಗಿ ನಮ್ಮ ಮಕ್ಕಳಿಗೆ ಅವರು ಕೋಚ್‌ ಆಗಿ ಬೇಡ ಎಂದು ತಿಳಿಸಿದ್ದೇವೆ. ಅವರನ್ನೇ ಮುಂದುವರಿಸಿದರೆ ನಮ್ಮ ಮಕ್ಕಳನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೇವೆ. 
 ಗಿರಿಮಲ್ಲ ಮೇತ್ರಿ, ಪಾಲಕರು 

ಸರ್ಕಾರದಿಂದ ಬಂದ ಉತ್ತಮ ಸೈಕ್ಲಿಂಗ್‌ ಮತ್ತು ಶೂ ನಮ್ಮ ಮಕ್ಕಳಿಗೆ ಕೊಡುತ್ತಿರಲಿಲ್ಲ. ಶೂ ಸೇರಿದಂತೆ ಇತರ ಉಪಕರಣ° ಕಚೇರಿಯಿಂದ ಮಾಯಾವಾಗುತ್ತವೆ. ಅವು ಎಲ್ಲಿಗೆ ಹೋಗುತ್ತವೆ ಎಂದು ಯಾರಿಗೂ ಗೊತ್ತಿಲ್ಲ. ಅದಕ್ಕಾಗಿ ನಮ್ಮ ಮಕ್ಕಳಿಗೆ ಬೇರೆ ಕೋಚ್‌ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೇವೆ.
 ಸಂಜು ಬಡಿಗೇರ, ಪಾಲಕರು

. ವಿಠ್ಠಲ ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next