Advertisement

ಹುಟ್ಟುಹಬ್ಬ ಆಚರಿಸದಿರಲು ನಟ ಬಿಗ್‌ ಬಿ ನಿರ್ಧಾರ

06:05 AM Oct 09, 2017 | Team Udayavani |

ಮುಂಬಯಿ:  ಅಕ್ಟೋಬರ್‌ 11ರಂದು 75 ವರ್ಷಕ್ಕೆ ಕಾಲಿಡಲಿರುವ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರು ಹುಟ್ಟುಹಬ್ಬ ಹಾಗೂ ದೀಪಾವಳಿಯನ್ನು ಆಚರಿಸುವುದಿಲ್ಲ ಎಂದು ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಗ್‌ ಬಿ, ಈ ಅವಧಿಯಲ್ಲಿ ಪ್ರಯಾಣದಲ್ಲಿರುತ್ತೇನೆ ಎಂದಿದ್ದಾರೆ. ಆದರೆ, ಜನ್ಮದಿನ, ದೀಪಾವಳಿ ಆಚರಿಸದೆ ಇರಲು ನಿಖರ ಕಾರಣವೇನು ಎಂದು ಅವರು ತಿಳಿಸಿಲ್ಲ. ಆಮೀರ್‌ ಖಾನ್‌ ನಟನೆಯ ಥಗ್ಸ್‌ ಆಫ್ ಹಿಂದುಸ್ತಾನ್‌ ಸಿನಿಮಾದ ಶೂಟಿಂಗ್‌ನಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next