ಮನುಷ್ಯನ ದೇಹದ ಇತರ ಭಾಗಗಳಂತೆ ಹಲ್ಲುಗಳ ಆರೋಗ್ಯ ಕೂಡಾ ಮುಖ್ಯ. ಹಾಗಾದರೆ ರಾತ್ರಿ ಊಟವಾದ ನಂತರ ನೀವು ಹಲ್ಲನ್ನು ಉಜ್ಜುತ್ತೀರಾ? ಅಥವಾ ಇಲ್ಲವೇ? ನೀವು ನಿಮ್ಮ ಬಾಯಿಯ ಶುಚಿತ್ವವನ್ನು ನಿರ್ಲಕ್ಷಿಸುತ್ತಿದ್ದೀರಾ? ಒಂದು ವೇಳೆ ಹಲ್ಲುಗಳ ಶುಚಿತ್ವಕ್ಕೆ ಮಹತ್ವ ನೀಡದಿದ್ದರೆ, ನಿಮ್ಮ ವಸಡಿನ ಆರೋಗ್ಯಕ್ಕಿಂತ ಹೃದಯರಕ್ತನಾಳದ ಆರೋಗ್ಯ ದೊಡ್ಡ ಪ್ರಮಾಣದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಸಂಶೋಧನೆಯಲ್ಲಿ ಪತ್ತೆಯಾದ ಅಂಶಗಳ ಪ್ರಕಾರ, ರಾತ್ರಿ ಊಟದ ನಂತರ ಹಲ್ಲುಗಳನ್ನು ಸ್ವಚ್ಛಗೊಳಿಸದಿದ್ದರೆ ಬಾಯಿಯ ಶುಚಿತ್ವ ಮತ್ತು ಪರಿಧಮನಿಯ ಹೃದಯ ಕಾಯಿಲೆಯಂತಹ ರಕ್ತನಾಳದ ಕಾಯಿಲೆಗೆ ಎಡೆಮಾಡಿಕೊಡಲಿದೆ ಎಂದು ಡಾ.ಸಮೀರ್ ಗುಪ್ತಾ ತಿಳಿಸಿದ್ದಾರೆ.
ಬಾಯಿಯ ಶುಚಿತ್ವವನ್ನು ಹೆಚ್ಚಿಸಿಕೊಳ್ಳುವ ಮೂಲಕ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಿ. ಹೃದಯರಕ್ತನಾಳದ ಕಾಯಿಲೆಯು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗುತ್ತಿದೆ. ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ಸಾವಿನ ಪ್ರಮಾಣ ಕಡಿಮೆಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪರಿಧಮನಿ ಮತ್ತು ಅಪಧಮನಿಗಳು ಹೃದಯ ಮತ್ತು ದೇಹದ ಇತರೆ ಅಂಗಗಳಿಗೆ ರಕ್ತ ಪೂರೈಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಬಾಯಿಯ ಶುಚಿತ್ವ ನಿರ್ಲಕ್ಷಿಸಿದಲ್ಲಿ ಹೃದಯ ರಕ್ತನಾಳದ ಕಾಯಿಲೆಗೆ ಎಡೆಮಾಡಿಕೊಡಲಿದೆ ಎಂದು ವೈದ್ಯರು ವಿವರಿಸಿದ್ದಾರೆ.
ವಸಡು ಮತ್ತು ಹಲ್ಲುಗಳಲ್ಲಿನ ಬ್ಯಾಕ್ಟೀಯಾದಿಂದ ಉಂಟಾಗುವ ಸೋಂಕುಗಳಿಂದಾಗಿ ಹೃದಯರಕ್ತನಾಳದ ಕಾಯಿಲೆಯ ಜೊತೆಗೆ ವಸಡು ಮತ್ತು ಹಲ್ಲುಗಳ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಆದರೆ ಈ ಎರಡು ಅಂಶಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ ಎಂದು ಡಾ.ಸಮೀರ್ ಯಾದವ್ ತಿಳಿಸಿದ್ದಾರೆ.