ಲಕ್ನೋ : ಅಧಿಕಾರದಲ್ಲಿರುವ ಹೊರತಾಗಿಯೂ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಸನ್ಯಾಸಿಯಾಗಿರುತ್ತಾ ರಾಜಕಾರಣಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸನ್ಯಾಸಿಯಾಗಿರುವ ನೀವು ರಾಜಕಾರಣವನ್ನು ಏಕೆ ಸೇರಿದಿರಿ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್ , ಸಮಾಜ ಸೇವೆಗಾಗಿ ನಾನು ರಾಜಕಾರಣ ಸೇರಿದೆ ಎಂದು ಹೇಳಿದರು.
ಅಧಿಕಾರದಲ್ಲಿದ್ದರೂ ನಾನು ಅಧಿಕಾರ ಸಂಲಿಪ್ತ; ಅಧಿಕಾರ ಪ್ರಜ್ಞೆ ಹೊಂದಿಲ್ಲದಿರುವ ಕಾರಣ ನಾನು ಅಧಿಕಾರಕ್ಕೆ ನಿರ್ಲಿಪ್ತ; ನಾನಿಲ್ಲಿರುವುದು ಲೋಕ ಕಲ್ಯಾಣ, ರಾಷ್ಟ್ರ ಕಲ್ಯಾಣಕ್ಕೆ ಎಂದು ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಈಚೆಗೆ ಎರಡು ವರ್ಷ ಪೂರೈಸಿದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.