ಮೈಸೂರು: ಮೈಮುಲ್ ನೇಮಕಾತಿ ಬಗ್ಗೆ ನನ್ನ ಹೇಳಿಕೆ ಬೆದರಿಕೆ ತಂತ್ರವಲ್ಲ, ಇದು ನನ್ನ ಹೋರಾಟವಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವರು ನನಗೆ ಬ್ಲಾಕ್‌ವೆುಲ್ ಮಾಡುತ್ತಿದ್ದಾರೆ. ಅವರು ಹೇಳಿದಂತೆ ತನಿಖೆ ಮಾಡಲಾಗುವುದಿಲ್ಲ ಎಂದಿದ್ದಾರೆ. ಆದರೆ, ನಾನು ಹೇಳಿದ ಹಾಗೆ ತನಿಖೆ ಮಾಡಿ ಎಂದು ಹೇಳಿಲ್ಲ.
ನೀವು ತನಿಖೆ ಮಾಡಿಸುತ್ತಿರುವ ರೀತಿ ಸರಿಯಲ್ಲ ಎಂದಷ್ಟೇ ಹೇಳಿದ್ದೆ. ನಿಬಂಧಕರಿಂದ ತನಿಖೆ ಮಾಡಿಸಿದರೆ ಸತ್ಯಾಂಶ ಹೊರ ಬರುವುದಿಲ್ಲ. ಹಾಗಾಗಿ ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಿ ಎಂದು ಒತ್ತಾಯಿಸಿದರು. ಮೈಮುಲ್ ಬಗ್ಗೆ ಹೀಗೆ ತನಿಖೆ ಮಾಡಿ ಎಂದು ನಾನು ಒತ್ತಾಯ ಮಾಡಿಲ್ಲ. ಸರಿಯಾದ ತನಿಖೆ ಆಗಲಿ ಎಂಬುದಷ್ಟೇ ನನ್ನ ಉದ್ದೇಶ. ಇದರಲ್ಲಿ ಪಾರದರ್ಶಕ ತನಿಖೆ ಆಗಿಲ್ಲ.
ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಒಎಂಆರ್ ಶೀಟ್ ಕೊಟ್ಟಿಲ್ಲ. ಪರೀಕ್ಷೆ ಮುಗಿದರು ವೆಬ್‌ಸೈಟ್‌ನಲ್ಲಿ ಕೀ ಆನ್ಸರ್‌ನ್ನು ಈವರೆಗೂ ಬಿಟ್ಟಿಲ್ಲ ಇದು ಏಕೆ? ಅಲ್ಲದೇ ಧಿಸೂಚನೆಯಲ್ಲಿ 165 ಮಂದಿಗೆ ಮಾತ್ರ ನೇಮಕಾತಿಗೆ ಅವಕಾಶ ನೀಡಲಾಗಿತ್ತು. ಈಗ 25 ಮಂದಿಯನ್ನು ಹೆಚ್ಚಾಗಿ ನೇಮಿಸಿಕೊಳ್ಳಲು ಸಹಕಾರ ಸಚಿವರು ಏಕೆ ಹೇಳಿದ್ದಾರೆ. ಇದು ಅಕ್ರಮವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಡೀಸಿ ಪತ್ರಕ್ಕಾದರೂ ಬೆಲೆ ಕೊಡಿ: ಮೈಸೂರಿನ ಡೀಸಿ ಮೈಸೂರು ಜಿಲ್ಲಾ ಸಹಕಾರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟಕ್ಕೆ ಮಾರ್ಚ್ 26ರಲ್ಲೇ ಪತ್ರ ಬರೆದಿದ್ದಾರೆ, ಅದರಂತೆ 2020ರ ಸೆ.13ಕ್ಕೆ ಮೈಮುಲ್ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗತ್ತೆ. ಕೂಡಲೇ ಚುನಾವಣಾಧಿಕಾರಿ ನೇಮಕ ಮಾಡಿ ಹಾಗೂ ಯಾವುದೇ ಸಹಕಾರಿ ಸಂಘದ ಮಂಡಳಿಯ ಕಚೇರಿಯಲ್ಲಿ ಅವಧಿ ಮುಗಿಯುವ
ಕೊನೆಯ 3 ತಿಂಗಳ ಮುಂಚೆ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳೇ ಪತ್ರದಲ್ಲಿ ಉಲ್ಲೇಖೀಸಿರುವಾಗ, ಉಳಿದಿರುವ ಮೂರು ತಿಂಗಳು 14 ದಿನದಲ್ಲಿ ನೇಮಕಾತಿ ಪ್ರಕ್ರಿಯೆ ಹೇಗೆ ಮುಗಿಸಲು ಸಾಧ್ಯ. ನೀವೇ ಕಾನೂನು ಮಾಡಿ ನೀವೇ ಗಾಳಿಗೆ ತೂರುತ್ತೀರಾ, ಹಾಗಾದರೆ ಸಚಿವರೇ ಯಾವುದೋ ಒತ್ತಡಕ್ಕೆ ಮಣಿದಿರಬೇಕು ಎಂದು ವಾಗ್ಧಾಳಿ ನಡೆಸಿದರು.
ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ: ನಾವು ಏನೇ ಹೇಳಿದರೂ, ನಮ್ಮ ಸರ್ಕಾರ ಇದೆ. ನಾವು ಮಾಡಿದ್ದೇ ಸರಿ ಅನ್ನೋದಾದರೆ ಅನಿವಾರ್ಯವಾಗಿ ಮೈಸೂರು ಜಿಲ್ಲೆಯ ನಮ್ಮ ಪಕ್ಷದ ಮುಖಂಡರು, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ಮಾಡಲು ಸಿದರಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ಜೆಡಿಎಸ್ ಮುಖಂಡ ಬೀರಿಹುಂಡಿ ಬಸವಣ್ಣ ಇದ್ದರು.