ನವದೆಹಲಿ: “ದೇಶದಲ್ಲಿ ಈಶಾನ್ಯ ಮುಂಗಾರು ಮಾರುತಗಳ ಪ್ರಭಾವ ಅಂತ್ಯಗೊಂಡಿದೆ. ಈ ಮಾರುತಗಳಿಂದ ಸುರಿಯುವ ಮಳೆಯು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚಾಗಿ (579.1 ಮಿ.ಮೀ.) ಸುರಿದಿದ್ದು, 1901ರ ನಂತರದ ವರ್ಷಗಳಲ್ಲಿ ಈಶಾನ್ಯ ಮಾರುತಗಳಿಂದ ಸುರಿದ ಅತಿ ಹೆಚ್ಚು ಮಳೆಯ ಪ್ರಮಾಣ ಇದಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
2021ರ ಅಕ್ಟೋಬರ್‌ನಿಂದ ನವೆಂಬರ್ ನಡುವಿನ ಅವಧಿಯಲ್ಲಿ ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ, ಕರೈಕರ್, ಯಾನಮ್, ಆಂಧ್ರಪ್ರದೇಶ, ಕೇರಳ, ಮಾಹೆಗಳಲ್ಲಿ ಉತ್ತಮ ಮಳೆಯಾಗಿದೆ.
ತಮಿಳುನಾಡಿನಲ್ಲಿ ಹೆಚ್ಚು ಮಳೆಯನ್ನು ತರುವ ಈ ಮಾರುತಗಳಿಂದ ಈ ಬಾರಿ ಒಟ್ಟಾರೆ ಮಳೆ ಪ್ರಮಾಣದ ಶೇ. 48ರಷ್ಟು ಮಳೆ ಬಿದ್ದಿದೆ. ಈ ಅವಧಿಯಲ್ಲಿ ಅಲ್ಲಿ, 447.4 ಮಿ.ಮೀ.ನಷ್ಟು ಮಳೆಯಾಗಿದೆ.
ದಾಖಲೆ ಬರೆದ ದೆಹಲಿ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ಜನವರಿಯಲ್ಲಿ ಬಿದ್ದ ಮಳೆ 122 ವರ್ಷಗಳ ದಾಖಲೆಯನ್ನು ಮುರಿದಿದೆ. ಇದೊಂದೇ ತಿಂಗಳಲ್ಲಿ 88.2 ಮಿ.ಮೀ.ನಷ್ಟು ಮಳೆಯಾಗಿದ್ದು, 1901ರ ಜನವರಿಯಲ್ಲಿ ಅತಿ ಹೆಚ್ಚು ಮಳೆಯಾಗಿತ್ತು.