Advertisement

ಉತ್ತರ ವಶಕ್ಕೆ ಪುರ ಗೆಲ್ಲಬೇಕು

06:38 AM Mar 17, 2019 | |

ಕ್ಷೇತ್ರದ ವಸ್ತುಸ್ಥಿತಿ: ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸತತ 2 ಬಾರಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಮತದಾರು ಕಾಂಗ್ರೆಸ್‌ ಕೈ ಹಿಡಿದಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಕೈ ಬೆಂಬಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಯತ್ತ ಒಲವು ತೋರಿರುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.

Advertisement

2014ರ ಲೋಕಸಭೆ ಚುನಾವಣೆಯಲ್ಲಿ ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ಶೇ.61 ಮತಗಳು ಬಿಜೆಪಿ ಪಾಲಾಗಿವೆ. 2014ರಲ್ಲಿ ಕೆ.ಆರ್‌.ಪುರದ 2,01,910 ಮತಗಳಲ್ಲಿ ಬಿಜೆಪಿ 1,12,144 ಮತ ಪಡೆದರೆ, ಕೇಂದ್ರ ಸಚಿವ ಸದಾನಂದಗೌಡರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಸಿ.ನಾರಾಯಣಸ್ವಾಮಿ 78,109 ಮತ ಗಳಿಸಿದ್ದರು. ಎಎಪಿ ಅಭ್ಯರ್ಥಿ ಬಾಬು ಮ್ಯಾಥ್ಯೂವ್‌ 6,517 ಮತ್ತು ಜೆಡಿಎಸ್‌ನ ಅಬ್ದುಲ್‌ ಅಜೀಂ 2,993 ಮತ ಪಡೆದಿದ್ದರು.

ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಸದ್ಯಕ್ಕೆ ಕೆ.ಆರ್‌.ಪುರ ವಿಧಾನಸಭೆ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಬಿಗಿಹಿಡಿತ ಸಾಧಿಸಿದ್ದು, 9 ವಾರ್ಡ್‌ಗಳ ಪೈಕಿ 7ರಲ್ಲಿ ಕಾಂಗ್ರೆಸ್‌ ಮತ್ತು 2ರಲ್ಲಿ ಬಿಜೆಪಿ ಪಾಲಿಕೆ ಸದಸ್ಯರಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಬೇಕಾದರೆ ಇಲ್ಲಿನ ಕಾಂಗ್ರೆಸ್‌ ಶಾಸಕರ ಬೆಂಬಲ ಅನಿವಾರ್ಯ.

ಸಂಸದರ ಪ್ರಮುಖ ಕೊಡುಗೆ
-ಕೆ.ಆರ್‌.ಪುರ ರೈಲು ನಿಲ್ದಾಣದ ಪಿಆರ್‌ಎಸ್‌ ಕೌಂಟರ್‌ನಲ್ಲಿ ತಡೆರಹಿತ ವಿದ್ಯುತ್‌ ಪೂರೈಕೆಗಾಗಿ ಸುಧಾರಿತ ಸ್ಟಾಂಡ್‌- ಬೈ ವಿದ್ಯುತ್‌ ವ್ಯವಸ್ಥೆ
-ಪ್ಲಾಟ್‌ ಫಾರಂ 2 ವಿಸ್ತರಣೆ
-ಬೈಯಪ್ಪನಹಳ್ಳಿ ನಿಲ್ದಾಣಲ್ಲಿ ರೈಲ್ವೆ ಮಟ್ಟದ ಪ್ಲಾಟ್‌ ಫಾರಂ ವಿಸ್ತರಣೆ
-ಕೆ.ಆರ್‌.ಪುರದಲ್ಲಿ ಕಲರ್‌ ಕೋಚ್‌ ಬೋರ್ಡ್‌ ನಿರ್ಮಾಣ
-ಎಲೆಕ್ಟ್ರಿಕ್‌ ರೈಲುಗಳನ್ನು ಡೀಸೆಲ್‌ ಶೆಡ್‌ನ‌ಲ್ಲಿ ನಿಲ್ಲಿಸಲು ಅನುವು 

ನಿರೀಕ್ಷೆಗಳು
-ಕಿಮ್ಸ್‌ ಮಾದರಿ ಆಸ್ಪತ್ರೆ ನಿರ್ಮಾಣ
-ಬೈಯಪ್ಪನಹಳ್ಳಿಯಿಂದ ಕೆ.ಆರ್‌.ಪುರವರೆಗೆ ಮೆಟ್ರೊ ವಿಸ್ತರಣೆ

Advertisement

-ವಾರ್ಡ್‌ಗಳು- 9
-ಬಿಜೆಪಿ -2
-ಕಾಂಗ್ರೆಸ್‌ – 7
-ಜೆಡಿಎಸ್‌ -0

-ಜನಸಂಖ್ಯೆ -6,39,723
-ಮತದಾರರ ಸಂಖ್ಯೆ -4,63,419
-ಪುರುಷರು -3,32,662
-ಮಹಿಳೆಯರು-3,07,061

2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು-2,01,910 (61%)
-ಬಿಜೆಪಿ ಪಡೆದ ಮತಗಳು -1,12,144 ಮತಗಳು (55.5%)
-ಕಾಂಗ್ರೆಸ್‌ ಪಡೆದ ಮತಗಳು – 78,109 ಮತಗಳು (38.7%)
-ಜೆಡಿಎಸ್‌ ಪಡೆದ ಮತಗಳು – 2,993  ಮತಗಳು (1.5%)

2014ರ ಚುನಾವಣೆಯಲ್ಲಿ
-ಬೈರತಿ ಬಸವರಾಜ ಕಾಂಗ್ರೆಸ್‌ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-8
-ಕಾಂಗ್ರೆಸ್‌ ಸದಸ್ಯರು-1
-ಜೆಡಿಎಸ್‌-0

ಮಾಹಿತಿ: ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next