Advertisement
ಬಡವರು ಜಾನುವಾರುಗಳನ್ನು ಸಾಕಿ ದರೆ, ಶ್ರೀಮಂತರು ಸಾಕುನಾಯಿಗಳನ್ನು ಹೊಂದಿರುತ್ತಾರೆ. ಸಾಕು ನಾಯಿಗಳು ಪಾಶ್ಚಾತ್ಯ ಬೂಜ್ವಾ ಸಿದ್ಧಾಂತದ ಐಷಾರಾ ಮಿಯ ಸಂಕೇತ. ಈ ಕಾರಣದಿಂದಾಗಿ ಸಾಕು ನಾಯಿಗಳನ್ನು ಮಾಂಸಾಹಾರಕ್ಕೆ ಬಳಸಿ ಕೊಳ್ಳಲು ಕಿಮ್ ಜಾಂಗ್ ಉನ್ ನಿರ್ಧ ರಿಸಿದ್ದಾರೆ ಎಂದು ಉತ್ತರ ಕೊರಿ ಯಾದ ಪತ್ರಿಕೆಗಳು ವರದಿಮಾಡಿವೆ.
ಕಿಮ್ ಜಾಂಗ್ ಉನ್ ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಆಡಳಿತ ಪಕ್ಷದ ರಹಸ್ಯ ಸಭೆ ನಡೆಸಿದ್ದಾರೆ. ಕೊರಿಯನ್ ಕ್ರಾಂತಿಯ ಆಶಯದಂತೆ ಪಕ್ಷ ಬಲ ವರ್ಧನೆ, ಕೊರೊನಾದಿಂದ ಹದ ಗೆಟ್ಟಿರುವ ಆರ್ಥಿಕ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.