ಸಿಯೋಲ್: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪತ್ನಿ ರೈ ಸೊಲ್ ಜು 5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ನಾಪತ್ತೆಯಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆ ಎಂಬ ಶಂಕೆಗಳಿಗೆ ತೆರೆಬಿದ್ದಿದೆ.
ಚಂದ್ರಮಾನ ಹೊಸವರ್ಷದ ರಜಾದಿನದಂದು ನಡೆದ ಸಂಗೀತೋತ್ಸವದಲ್ಲಿ ಕಿಮ್, ಪತ್ನಿಯೊಂದಿಗೆ ಹಾಜರಾದರು.
ಒಡನೆಯೇ ಜನರು ಜೋರಾಗಿ ಕೂಗಿ ಇಬ್ಬರನ್ನೂ ಸ್ವಾಗತಿಸಿದರು. ಜನರ ಈ ಖುಷಿಗೆ ಇನ್ನೊಂದು ಕಾರಣವೂ ಇದೆ.
ಎಲ್ಲ ಸಂಕಷ್ಟಗಳ ನಡುವೆಯೂ ಕಿಮ್ ಉತ್ತರ ಕೊರಿಯವನ್ನು ಬಲಿಷ್ಠವಾಗಿ ಮುನ್ನಡೆಸುತ್ತಿದ್ದಾರೆ. ಅದರ ರಕ್ಷಣಾ ವ್ಯವಸ್ಥೆಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ ಎನ್ನುವುದೇ ಇದಕ್ಕೆ ಕಾರಣ.
ಇದನ್ನೂ ಓದಿ:ಗೋವಾದಲ್ಲಿ ಬಿಜೆಪಿ 30 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ : ಪ್ರಭು ಚವ್ಹಾಣ್
ಜ.30ರಂದು ಕಿಮ್ ದೂರ ತಲುಪಬಲ್ಲ ಕ್ಷಿಪಣಿಯೊಂದನ್ನು ಪರೀಕ್ಷಿಸಿದ್ದಾರೆ. ಅದೇ ತಿಂಗಳಲ್ಲಿ ಇನ್ನೂ ಕೆಲ ಕ್ಷಿಪಣಿಗಳನ್ನು ಪರೀಕ್ಷಿಸಿದ್ದಾರೆ. ಇದು ಪರೋಕ್ಷವಾಗಿ ಅಮೆರಿಕದ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗಿದೆ.