Advertisement

“ದ.ಕೊರಿಯ ಹೇಳಿಕೆಗಳು ನಾಯಿ ಬೊಗಳುವುದಕ್ಕೆ ಸಮ’

12:08 AM Dec 21, 2022 | Team Udayavani |

ಸಿಯೋಲ್‌: ಸದಾ ದ.ಕೊರಿಯಾ ವಿರುದ್ಧ ಕಾಲು ಕೆರೆದುಕೊಂಡು ಜಗಳ ಮಾಡುವ ಉತ್ತರ ಕೊರಿಯಾ ಈಗ ಮತ್ತೆ ಕಿಡಿಕಾರಿದೆ. ಉ.ಕೊರಿಯಾ ಸೇನಾ ಉದ್ದೇಶದ ಗುಪ್ತಚರ ಉಪಗ್ರಹವನ್ನು ಪ್ರಯೋಗಾರ್ಥ ಉಡಾವಣೆ ಮಾಡಿದ್ದಲ್ಲ, ಅದು ನಿಜವಾಗಿ ಉಡಾವಣೆ ಮಾಡಿದ್ದು ಯುದ್ಧ ಕ್ಷಿಪಣಿಗಳನ್ನು ಎಂದು ದ.ಕೊರಿಯಾ ಆರೋಪಿಸಿತ್ತು. ಅದನ್ನು ತಿರಸ್ಕರಿಸಿರುವ ಉ.ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸಹೋದರಿ ಕಿಮ್‌ ಯೋ ಜಾಂಗ್‌, ದ.ಕೊರಿಯಾ ಅಭಿಪ್ರಾಯ ನಾಯಿ ಬೊಗಳುವುದಕ್ಕೆ ಸಮ, ನಿರುಪಯುಕ್ತ ತಲೆಹರಟೆ ಹೇಳಿಕೆಗಳು ಎಂದಿದ್ದಾರೆ.

Advertisement

ಭಾನುವಾರ ತಾನೊಂದು ಸೇನಾ ಉದ್ದೇಶದ ಗುಪ್ತಚರ ಉಪಗ್ರಹ ಉಡಾವಣೆ ಮಾಡಿದ್ದೇನೆಂದು ಉ.ಕೊರಿಯಾ ಹೇಳಿಕೊಂಡಿತ್ತು. ಆ ಉಪಗ್ರಹದ ಮೂಲಕ ತೆಗೆದಿದ್ದೆನ್ನಲಾದ ದ.ಕೊರಿಯಾ ನಗರಗಳ ಎರಡು ಚಿತ್ರಗಳನ್ನು ತನ್ನ ಪತ್ರಿಕೆಯಲ್ಲಿ ಬಿಡುಗಡೆ ಮಾಡಿತ್ತು. ಅತ್ಯಂತ ಕಡಿಮೆ ರೆಸೊಲ್ಯೂಷನ್‌ ಹೊಂದಿರುವ ಆ ಚಿತ್ರಗಳನ್ನು ದ.ಕೊರಿಯಾ ತಿರಸ್ಕರಿಸಿತ್ತು.

ಇದೇ ವೇಳೆ, ಉ.ಕೊರಿಯಾದ “ಉಡಾವಣೆಗಳ’ ಬೆನ್ನಲ್ಲೇ ಅಮೆರಿಕ ದ.ಕೊರಿಯಾಗೆ ಹಲವು ಅಣ್ವಸ್ತ್ರಸಜ್ಜಿತ ಯುದ್ಧ ವಿಮಾನಗಳನ್ನು ಕಳುಹಿಸಿದೆ. ದ.ಕೊರಿಯಾವನ್ನು ಎಂತಹ ಪರಿಸ್ಥಿತಿಯಲ್ಲೂ ರಕ್ಷಿಸುವುದಾಗಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next