Advertisement

ಅಮೆರಿಕಕ್ಕೆ ಸೆಡ್ಡು!ಉತ್ತರ ಕೊರಿಯಾದಿಂದ ಇನ್ನೊಂದು ಕ್ಷಿಪಣಿ ಪರೀಕ್ಷೆ

10:00 AM Jul 29, 2017 | |

ಸಿಯೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜೊಂಗ್‌ ಅತ್ಯಾಧುನಿಕ ಖಂಡಾಂತರ ಕ್ಷಿಪಣಿಯೊಂದರ ಪರೀಕ್ಷೆ ನಡೆಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಸೆಡ್ಡು ಹೊಡೆದಿದ್ದಾರೆ. ಮಾತ್ರವಲ್ಲದೆ ಕ್ಷಿಪಣಿಯ ಮುಖ್ಯ ಗುರಿ ಅಮೆರಿಕ ಎಂದಿದ್ದಾರೆ.

Advertisement

ಕ್ಷಿಪಣಿ ಪರೀಕ್ಷೆ ನಡೆಸಿರುವ ಬಗ್ಗೆ ಉತ್ತರಕೊರಿಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದು,’ಇದು ಅಮೆರಿಕಕ್ಕೆ ಕಠಿಣ ಎಚ್ಚಿರಿಕೆ’ ಎಂದು ಬರೆದಿವೆ. 3,724.9 ಕೀ.ಮಿ ದೂರವನ್ನು 47 ನಿಮಷ 12 ಸೆಕೆಂಡ್‌ಗಳಲ್ಲಿ ತಲುಪ ಬಲ್ಲದು ಎಂದು ಹೇಳಲಾಗಿದೆ. 

 ‘ಶಸ್ತ್ರಾಸ್ತ್ರಗಳು ಉತ್ತರಕೊರಿಯಾದ ಅಮೂಲ್ಯ ಸಂಪತ್ತು ಅವುಗಳು ಅಚ್ಚರಿಯ ದಾಳಿ ನಡೆಸಬಲ್ಲವು’ ಎಂದು  ಕಿಮ್‌ ಜೊಂಗ್‌ ಹೇಳಿರುವುದಾಗಿ ವರದಿಯಾಗಿದೆ. 

ಉತ್ತರ ಕೋರಿಯಾ ಪರೀಕ್ಷೆ ನಡೆಸಿರುವ ಕ್ಷಿಪಣಿ 1,000 ಕೀ.ಮಿ ತಲುಪಿ ಜಪಾನ್‌ ಸಮುದ್ರದಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next