ರಾಜಧಾನಿ ಪಿಯಾಂಗ್‌ಯಾಂಗ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಕ್ಷಿಪಣಿಗಳನ್ನು ಜೋಡಿಸಿಕೊಳ್ಳುತ್ತಿರುವ ದೃಶ್ಯಗಳನ್ನು ಇತ್ತೀಚೆಗಷ್ಟೆ ಪತ್ತೆ ಮಾಡಲಾಗಿದೆ ಎಂದು ಮೂಲಗಳು ಹೇಳುತ್ತಿರುವುದಾಗಿ ದಕ್ಷಿಣ ಕೊರಿಯಾದ “ಕೊರಿಯನ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ (ಕೆಬಿಎಸ್)’ ಶುಕ್ರವಾರ ವರದಿ ಮಾಡಿದೆ.
Advertisement
ಇದೀಗ ಈ ಸುದ್ದಿ ದಕ್ಷಿಣ ಕೊರಿಯಾದಲ್ಲಿ ಆತಂಕದ ಸನ್ನಿವೇಶ ಸೃಷ್ಟಿಸಿದೆ.ಅಲ್ಲದೆ, ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಗುಪ್ತಚರ ತನಿಖಾಧಿಕಾರಿಗಳು ಇದನ್ನು ಪತ್ತೆ ಮಾಡಿದ್ದಾರೆ. ಪಾಂಗ್‌ಯಾಂಗ್‌ನಲ್ಲಿರುವ ಕ್ಷಿಪಣಿ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದಿಂದ ಹಲವು ಕ್ಷಿಪಣಿಗಳನ್ನು ಸಾಗಿಸಲಾಗುತ್ತಿರುವುದಾಗಿ ಕೆಬಿಎಸ್ ವರದಿ ಮಾಡಿದೆ. ಆದರೆ, ಯಾವತ್ತು, ಯಾವ ವೇಳೆಯಲ್ಲಿ ಸಾಗಾಟ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಹೇಳಿದೆ.
– ರೆಕ್ಸ್ ಟಿಲ್ಲರ್‌ಸನ್,
ಅಮೆರಿಕ ವಿದೇಶಾಂಗ ಸಚಿವ