Advertisement

ಟ್ರಂಪ್‌ ಟ್ರಾವೆಲ್‌ ಶಾಕ್‌

06:10 AM Sep 26, 2017 | |

ವಾಷಿಂಗ್ಟನ್‌: ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಸಮರ ಮುಂದುವರಿದಿದೆ. ಉತ್ತರ ಕೊರಿಯಾ ಅಟಾಟೋಪಕ್ಕೆ ಕಡಿವಾಣ ಹಾಕಲೇಬೇಕೆನ್ನುವ ನಿರ್ಧಾರಕ್ಕೆ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮತ್ತೂಂದು ನಿಷ್ಠುರ ನಿರ್ಣಯ ತೆಗೆದುಕೊಂಡಿದ್ದಾರೆ. ಈಗಾಗಲೇ 6 ಮುಸ್ಲಿಂ ರಾಷ್ಟ್ರಗಳಿಗೆ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಉತ್ತರ ಕೊರಿಯಾ ಮೇಲೂ ಹೇರಿ ಆದೇಶ ಹೊರಡಿಸಿದ್ದಾರೆ.

Advertisement

ಐದು ರಾಷ್ಟ್ರಗಳ ಮೇಲೆ ಈಗಾಗಲೇ ಹೇರಲಾಗಿದ್ದ ಪ್ರಯಾಣ ನಿರ್ಬಂಧದ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಇದನ್ನು ನವೀಕರಿಸಿದ ಅಮೆರಿಕ, ಈ ಪಟ್ಟಿಗೆ ಉತ್ತರ ಕೊರಿಯಾ, ಚಾಡ್‌ ಹಾಗೂ ವೆನಿಜುವೆಲಾ ದೇಶಗಳನ್ನೂ ಸೇರ್ಪಡೆ ಮಾಡಿದೆ. ಆದರೆ ಈ ಮೊದಲಿನ ಪಟ್ಟಿಯಲ್ಲಿದ್ದ ಸುಡಾನ್‌ ದೇಶವನ್ನು ಈ ನಿರ್ಬಂಧದಿಂದ ಕೈಬಿಡಲಾಗಿದೆ.

ಪರಿಷ್ಕೃತ ಪಟ್ಟಿಯಲ್ಲಿರುವ ದೇಶಗಳಿಗೆ ಪ್ರಯಾಣ ನಿರ್ಬಂಧ ಅ.18ರಿಂದ ಜಾರಿಗೆ ಬರಲಿದೆ. ಆದರೆ ಸುಡಾನ್‌ ಹಾಗೂ ಇರಾಕ್‌ ಪ್ರವಾಸಿಗರ ಮೇಲೆ ಹೆಚ್ಚುವರಿ ನಿಗಾ ವಹಿಸಬೇಕು ಹಾಗೂ ಕಠಿಣ ತಪಾಸಣೆಗೆ ಒಳಪಡಿಸಬೇಕೆನ್ನುವ ನಿರ್ಣಯಕ್ಕೆ ಬಂದಿದೆ. 

ಜಪಾನ್‌ನಲ್ಲಿ ಅವಧಿಗೆ ಮುನ್ನವೇ ಚುನಾವಣೆ
ಉತ್ತರ ಕೊರಿಯಾದ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಪಾನ್‌ನ ಪ್ರಧಾನಿ ಶಿಂಜೋ ಅಬೆ ಅವರು ಅವಧಿಪೂರ್ವ ಚುನಾವಣೆಗೆ ಮುಂದಾಗಿ ದ್ದಾರೆ. ಸೋಮವಾರ ಇದನ್ನು ಪ್ರಕಟಿಸಿರುವ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಕ್ಕೇರಲು ನಿರ್ಧರಿಸಿದ್ದಾರೆ. ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಮಹಾ ಕುಸಿತಕ್ಕೂ ಕಾರಣವಾಗಬಹುದಾದ ಸಾಧ್ಯತೆಗಳ ಬಗ್ಗೆ ಈಗ ವಿಶ್ಲೇಷಿಸಲಾಗುತ್ತಿದೆ. ಚುನಾ ವಣೆ ದಿನಾಂಕವನ್ನು ಶಿಂಜೋ ಪ್ರಕಟಿಸದಿದ್ದರೂ, ಅ.22ರಂದು ನಡೆಯಬಹುದು ಎನ್ನಲಾಗಿದೆ.

ಸೆನ್ಸೆಕ್ಸ್‌ ಭಾರಿ ಕುಸಿತ
ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಘರ್ಷಣೆ ತಾರಕಕ್ಕೇರಿರುವ ನಡು ವೆಯೇ ಕಚ್ಚಾ ತೈಲ ದರವೂ ಏರಿಕೆ ಕಂಡಿದ್ದು, ಪರಿಣಾಮ ಮುಂಬೈ ಷೇರುಪೇಟೆಯ ಮೇಲೂ ಆಗಿದೆ. ದಿನಾಂತ್ಯಕ್ಕೆ ಸೆನ್ಸೆಕ್ಸ್‌ 296 ಅಂಕ ಕುಸಿತ ಕಂಡಿದ್ದು, ನಿಫ್ಟಿ ಕೂಡ 91 ಅಂಕ ಕುಸಿದು 9,900ಕ್ಕೆ ಅಂತ್ಯಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next