Advertisement

ಕೈಕೊಟ್ಟ ಬೋಟ್ : ರಕ್ಷಣೆಗೆಂದು ಹೋದ ಯುವಕರು ಸಂಕಷ್ಟದಲ್ಲಿ

09:46 AM Aug 09, 2019 | Hari Prasad |

ಗದಗ: ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿರುವುದರಿಂದ ನದಿ ನೀರು ಉಕ್ಕಿ ಗದಗ ಜಿಲ್ಲೆಯ ಕಣ್ಣೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇದೇ ವೇಳೆ ಮನೆಯೊಂದರಲ್ಲಿ ಸಿಲುಕಿದ್ದ ಆರು ಜನರು ರಕ್ಷಣೆಗಾಗಿ ತೆರಳುತ್ತಿದ್ದ ದೋಣಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ರಕ್ಷಣಾ ಕಾರ್ಯ ವಿಳಂಬವಾದ ಘಟನೆ ವರದಿಯಾಗಿದೆ.

Advertisement

ಪ್ರವಾಹದ ನೀರು ಹೆಚ್ಚಾಗಿದ್ದರಿಂದ ಕೊಣ್ಣೂರು ಗ್ರಾಮದ ಜನರನ್ನು ಸಮೀಪದ ಎತ್ತರದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸ್ಥಳಾಂತರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಆರು ಜನ ಯುವಕರು ಪ್ರವಾಹದಲ್ಲಿ ಸಿಲುಕಿಕೊಂಡರು.

ಇತ್ತ ಇವರನ್ನು ರಕ್ಷಿಸಲು ತೆರಳಬೇಕಾಗಿದ್ದ ದೋಣಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿತು. ಆ ಸಂದರ್ಭದಲ್ಲಿ ಯುವಕರು ಮನೆಯೊಂದರ ಮೂರನೇ ಮಹಡಿಯನ್ನು ಏರಿ ನಿಂತರು. ಬಳಿಕ ದೋಣಿಯನ್ನು ಸರಿಪಡಿಸಿ ಪ್ರವಾಹಲ್ಲಿ ಸಿಲುಕಿಕೊಂಡಿದ್ದ ಯುವಕರನ್ನು ರಕ್ಷಿಸಲಾಯಿತು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next