Advertisement
ಮಂಜಿನ ವಾತಾವರಣದಿಂದ ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಸೋಮವಾರ ಆಗ್ರಾ-ಲಕ್ನೋ ಎಕ್ಸ್ ಪ್ರಸ್ ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅವಘಡಗಳು ಸಂಭವಿ ಸಿದ್ದು, ಮೂವರು ನೇಪಾಲಿಯರು ಸಹಿತ 7 ಮಂದಿ ಸಾವಿ ಗೀಡಾಗಿದ್ದಾರೆ. ಶೀತಗಾಳಿಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಶಾಲಾ ಮಕ್ಕಳಿಗೆ ನೀಡ ಲಾದ ಚಳಿಗಾಲದ ರಜೆಯನ್ನು ಜ.15ರವರೆಗೆ ವಿಸ್ತರಿಸಿದೆ.
Related Articles
Advertisement
ಕೈದಿಗಳಿಗೆ ಬಿಸಿನೀರು!ಕೊರೆಯುವ ಚಳಿಯಿಂದ ಒದ್ದಾಡುತ್ತಿದ್ದ ದಿಲ್ಲಿಯ 16 ಕೇಂದ್ರ ಕಾರಾಗೃಹಗಳ ಕೈದಿಗಳಿಗೆ ಬಿಸಿ ನೀರು ಒದಗಿಸಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ತಿಹಾರ್, ಮಂಡೋಲಿ, ರೋಹಿಣಿ ಸಹಿತ 16 ಜೈಲುಗಳಲ್ಲಿನ ಕೈದಿಗಳಿಗೆ ಸ್ನಾನಕ್ಕೆ ಹಾಗೂ ಸ್ವತ್ಛತಾ ಅಗತ್ಯಗಳಿಗೆ ಬಿಸಿ ನೀರು ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಜತೆಗೆ, 65 ವರ್ಷ ದಾಟಿದ ಕೈದಿಗಳಿಗೆ ಮರದ ಮಂಚದ ಜತೆಗೆ ಹಾಸಿಗೆಯನ್ನೂ ನೀಡಲು ನಿರ್ಧರಿಸಲಾಗಿದೆ. ಪ್ರಭಾವಿ ಕೈದಿಗಳು ಮಾತ್ರ ಒಂದು ಬಕೆಟ್‌ಗೆ 5 ಸಾವಿರ ರೂ. ನೀಡಿ ಬಿಸಿ ನೀರು ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಈ ಕ್ರಮ ಕೈಗೊಂಡಿದ್ದಾರೆ. ಸ್ಕಿಡ್ ನಿಗ್ರಹ ಚೈನ್ ಕಡ್ಡಾಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಜು ತುಂಬಿದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ಇನ್ನು ಮುಂದೆ ಸ್ಕಿಡ್‌ನಿಗ್ರಹ ಚೈನ್(ಆ್ಯಂಟಿ ಸ್ಕಿಡ್ ಚೈನ್) ಕಡ್ಡಾಯಗೊಳಿಸಿ ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಜನರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇಂಥ ರಸ್ತೆಗಳಲ್ಲಿ ಸಂಚರಿಸುವ ಎಲ್ಲ ಖಾಸಗಿ ಮತ್ತು ಸರ್ಕಾರಿ ವಾಹನ ಗಳು ಟೈರ್‌ಗಳಲ್ಲಿ ಸ್ಕಿಡ್ ನಿಗ್ರಹ ಚೈನ್‌ಗಳನ್ನು ಅಳವಡಿಸಿರಬೇಕು. ನಿಯಮ ಉಲ್ಲಂ ಸಿದರೆ 1,000 ರೂ. ದಂಡ ವಿಧಿ ಸಲಾಗುವುದು ಎಂದೂ ಆದೇಶದಲ್ಲಿ ಉಲ್ಲೇಖೀಸಲಾಗಿದೆ.