ಸುಳ್ಯ/ಅರಂತೋಡು/ಕಡಬ: ಬುಧವಾರ ಸಂಜೆ ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಮಳೆಯಾಗಿದೆ.
ತಾಲೂಕಿನ ಅಡ್ತಲೆ, ಮರ್ಕಂಜ, ಸಂಪಾಜೆ, ಜೋಡುಪಾಲ, ಚೊಕ್ಕಾಡಿ, ಮೇರ್ಕಜೆ, ಸಂಕೇಶ, ಜೀರ್ಮುಕ್ಕಿ ಭಾಗದಲ್ಲಿ ಮಳೆ ಸುರಿದಿದೆ. ಸುಬ್ರಹ್ಮಣ್ಯ ಪರಿಸರದ ಅಲ್ಲಲ್ಲಿ ಬುಧವಾರ ಸಂಜೆ ಮಳೆಯಾಗಿದೆ.
ಸುಬ್ರಹ್ಮಣ್ಯ, ಕುಲ್ಕುಂದ, ಕೊಂಬಾರು, ಬಿಳಿನೆಲೆ, ಹರಿಹರ, ಸುಳ್ಯ, ಬಳ್ಪ, ಪಂಜ, ಕಲ್ಮಡ್ಕ ಮತ್ತು ಸುತ್ತಮುತ್ತ ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಈ ಪರಿಸರದಲ್ಲಿ ಎರಡು- ಮೂರು ದಿನ ಗಳಿಂದ ಸಂಜೆ ಸಾಧಾರಣ ಮಳೆಯಾಗುತ್ತಿದೆ.
ಇದನ್ನೂ ಓದಿ:ಕಾಮಗಾರಿಗೆ ಸಿಗಂದೂರು ವನ್ಯಜೀವಿ ಸಂರಕ್ಷಿತ ಪ್ರದೇಶದಿಂದ ಮಣ್ಣು ; ಸ್ಥಳೀಯರ ಆಕ್ಷೇಪ
ಕಡಬ ತಾಲೂಕಿನ ವಿವಿಧೆಡೆ ಕೂಡ ಬುಧವಾರ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ಕಡಬ ಪೇಟೆ ಸುತ್ತಲಿನ ಪರಿಸರ, ಕೋಡಿಂಬಾಳ, ಮರ್ದಾಳ ಪರಿಸರದಲ್ಲಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದಾಗಿ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದ್ದು, ಕೃಷಿಕರು ತೊಂದರೆಗೊಳಗಾದರು.