Advertisement

Manipur; ಇಬ್ಬರು ಬಾಲಕರು ನಾಪತ್ತೆ: 33 ಗಂಟೆಗಳ ಬಂದ್, ಜನಜೀವನ ಅಸ್ತವ್ಯಸ್ತ

05:11 PM Nov 11, 2023 | Vishnudas Patil |

ಇಂಫಾಲ್: ಅಖಮ್ ಅವಾಂಗ್ ಲೈಕೈಯಿಂದ ಇಬ್ಬರು ಹದಿಹರೆಯದ ಹುಡುಗರು ನಾಪತ್ತೆಯಾದ ಬಳಿಕ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಶುಕ್ರವಾರ ಕರೆ ನೀಡಿರುವ 33 ಗಂಟೆಗಳ ರಾಜ್ಯವ್ಯಾಪಿ ಬಂದ್‌ನಿಂದಾಗಿ ಮಣಿಪುರದ ಕಣಿವೆ ಪ್ರದೇಶಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ಶುಕ್ರವಾರ ಬೆಳಗ್ಗೆ 4 ಗಂಟೆಗೆ ಆರಂಭಗೊಂಡು ಮಧ್ಯಾಹ್ನ 1 ಗಂಟೆಗೆ ಬಂದ್ ಮಾಡಲು ನಿರ್ಧರಿಸಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಿದ್ದರೂ ನಾಪತ್ತೆಯಾಗಿರುವ ಇಬ್ಬರು ಹದಿಹರೆಯದವರ ಪತ್ತೆ ಹಚ್ಚಲು ವಿಫಲವಾದ ಕಾರಣ ಅದನ್ನು ಶನಿವಾರ ಮಧ್ಯಾಹ್ನ 1 ಗಂಟೆಯವರೆಗೆ ವಿಸ್ತರಿಸಲಾಯಿತು.

ಬಂದ್ ಅವಧಿ ಮುಗಿಯುವ ಮೊದಲು ಇಬ್ಬರು ಬಾಲಕರು ಇರುವ ಸ್ಥಳವನ್ನು ರಾಜ್ಯ ಸರ್ಕಾರ ದೃಢಪಡಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಜೆಎಸಿ ಎಚ್ಚರಿಸಿದೆ. ಜೆಎಸಿಯು ಸಿವಿಲ್ ಸೊಸೈಟಿ ಸಂಸ್ಥೆಗಳು (ಸಿಎಸ್‌ಒಗಳು), ವಿದ್ಯಾರ್ಥಿ ಸಂಸ್ಥೆಗಳು ಮತ್ತು ಸಾರ್ವಜನಿಕರ ಬೆಂಬಲಿತ ಸಂಘಟನೆಯಾಗಿದೆ.

ಬಂದ್‌ನಿಂದಾಗಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಚೇರಿಗಳು, ಬ್ಯಾಂಕ್‌ಗಳು, ಪೆಟ್ರೋಲ್ ಪಂಪ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಬಂದ್ ಆಗಿದ್ದು, ಮೊದಲ ದಿನ ಕೆಲವು ವಾಹನಗಳು ತುರ್ತು ಸಂದರ್ಭಗಳಲ್ಲಿ ಸಂಚರಿಸುವುದನ್ನು ಹೊರತುಪಡಿಸಿ ರಸ್ತೆಗಳು ನಿರ್ಜನವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next