Advertisement

Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ

11:17 PM May 15, 2024 | Team Udayavani |

ಬೆಂಗಳೂರು: 2023-24ರ ಸಾಲಿನ ಎಸೆಸೆಲ್ಸಿ ಪರೀಕ್ಷೆ -1ಕ್ಕೆ ನೋಂದಾಯಿಸಿ ಕೊಂಡಿದ್ದರೂ, ಶೇ. 75ರಷ್ಟು ಹಾಜರಾತಿ ಇಲ್ಲದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಜೂನ್‌ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆ-2ಕ್ಕೆ ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ನೀಡಿದೆ.

Advertisement

ಈ ಬಾರಿ ಹಾಜರಾತಿ ಕೊರತೆಯಿಂದ ಅಂದಾಜು 26,692 ವಿದ್ಯಾರ್ಥಿಗಳ ನೋಂದಣಿ ಮುಖ್ಯ ಶಿಕ್ಷಕರ ಹಂತದಲ್ಲೆ ರದ್ದಾಗಿತ್ತು. ಇವರು ಮುಖ್ಯೋಪಾಧ್ಯಾಯರ ಲಾಗಿನ್‌ನಲ್ಲಿ ರಿಜಿಸ್ಟ್ರೇಶನ್‌ ಫಾರ್‌ ಎಸೆಸೆಲ್ಸಿ -2024 ಎಕ್ಸಾಂ 2 ಮೆನುನಲ್ಲಿ ರಿಜಿಸ್ಟ್ರೇಷನ್‌ ಫಾರ್‌ ಪ್ರೈವೇಟ್‌ ಫ್ರೆಶ್‌ ಎಂಬ ಸಬ್‌ ಮೆನು ಬಳಸಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ನೋಂದಣಿಗೆ ಮೇ 18ರ ಸಂಜೆ 5.30ರ ವರೆಗೆ ಮತ್ತು ಚಲನ್‌ ಮೂಲಕ ಬ್ಯಾಂಕ್‌ಗೆ ಶುಲ್ಕ ಪಾವತಿಸಲು ಮೇ 20ರಿಂದ ಮೇ 21ರವರೆಗೆ ಸಮಯ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next