Advertisement

ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನೋರಾ ಫತೇಹಿ

08:17 PM Dec 12, 2022 | Team Udayavani |

ಮುಂಬೈ: ಬಾಲಿವುಡ್ ನಟಿಯರಾದ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಸಿಕೊಂಡು ನಟಿಮಣಿಯರಿಬ್ಬರು ಸುದ್ದಿಯಾಗಿದ್ದರು.

Advertisement

ಇದೀಗ ನಟಿ ನೋರಾ ಫತೇಹಿ ಅವರು ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸು ದಾಖಲು ಮಾಡಿದ್ದಾರೆ.

ಒಂದೇ ರೀತಿಯ ಹಿನ್ನೆಲೆ ಹೊಂದಿರುವ ಅವರಿಬ್ಬರೂ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ನೋರಾ ಫತೇಹಿ ಅವರ ವೃತ್ತಿಜೀವನವನ್ನು ನಾಶಮಾಡುವ ಸಲುವಾಗಿ ಕ್ರಿಮಿನಲ್ ರೂಪದಲ್ಲಿ ಮಾನಹಾನಿ ಮಾಡಲು ಪ್ರಯತ್ನಿಸಿದರು” ಎಂದು ನೋರಾ ಫತೇಹಿ ತನ್ನ ಮನವಿಯಲ್ಲಿ ತಿಳಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿತ್ತು.

ಇದನ್ನೂ ಓದಿ:ರೈಲು ಢಿಕ್ಕಿ ಹೊಡೆದು ಕಡವೆ ಸಾವು: ಇಂದ್ರಾಳಿ ರೈಲ್ವೇ ಸೇತುವೆ ಸಮೀಪ ಘಟನೆ

Advertisement

ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಜಾಕ್ವೆಲಿನ್ ನೀಡಿದ್ದ ಲಿಖಿತ ಮನವಿಗೆ ಸಂಬಂಧಿಸಿದಂತೆ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. “ಇ.ಡಿ ತನ್ನನ್ನು ತಪ್ಪಾಗಿ ಈ ಪ್ರಕರಣದಲ್ಲಿ ಸಿಲುಕಿಸುತ್ತಿದೆ, ಆದರೆ ವಂಚಕ ಸುಕೇಶ್ ಚಂದ್ರಶೇಖರ್ ಅವರಿಂದ ಉಡುಗೊರೆಗಳನ್ನು ಪಡೆದ ನೋರಾ ಫತೇಹಿಯಂತಹ ಸೆಲೆಬ್ರಿಟಿಗಳನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ.” ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರು.

ನಟಿ ನೋರಾ ಫತೇಹಿ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಈ ವಿಷಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಮಾತ್ರ ತನಗೆ ಸಂಪರ್ಕವಿದೆ ಎಂದು ಅವರು ಹೇಳಿದ್ದಾರೆ. ಅಲ್ಲಿಂದ ಸುಕೇಶ್ ನಿಂದ ಯಾವುದೇ ಉಡುಗೊರೆಗಳನ್ನು ಸ್ವೀಕರಿಲ್ಲ ಎಂದು ನೋರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next