Advertisement
ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರಿ ಬಾದಾಮಿಯಿಂದ 21 ಕಿ.ಮೀ. ದೂರದ ಸೋಮನಕೊಪ್ಪದಲ್ಲಿ ಈ ಭಜನೆ ಕೇಳಿಸುತ್ತದೆ. ಇಲ್ಲಿನ ಶಿವಾನಂದ ಮಠ ಈ ಭಜನೆಯಿಂದಲೇ ಗಮನ ಸೆಳೆದಿದೆ.
Related Articles
Advertisement
ಏನಿದೆ ಒಪ್ಪಿಗೆ ಪತ್ರದಲ್ಲಿ?
“..ಎಲ್ಲರೂ ಆತ್ಮ ಸಂತೋಷದಿಂದ ಸತ್ಯದಲ್ಲಿ ಹರಿಶ್ಚಂದ್ರನಂತೆ ಮತ್ತು ಭಕ್ತಿಯಲ್ಲಿ ಬಸವಣ್ಣನವರಂತೆ ಸದರಿ ಸಪ್ತಾಹವನ್ನು ನಡೆಸಲು ಒಪ್ಪಿಕೊಂಡಿರುತ್ತೇವೆ…’ ಎಂಬ ವಿವರಗಳಿರುವ ಒಪ್ಪಿಗೆ ಪತ್ರಕ್ಕೆ ಗ್ರಾಮದ ಹಿರಿಯರಾದ ಸೋಮನಿಂಗಪ್ಪ, ಸೋಮಪ್ಪ ಮುಷ್ಠಿಗೇರಿ, ಪಾಟೀಲ ವೈ.ಆರ್, ಪಕೀರಪ್ಪ, ಭೀಮಪ್ಪ ದಂಡಿನ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ. ಹೀಗೆ ಆಗಸ್ಟ್ 23, 1970ರಿಂದ ಅಖಂಡ ಭಜನೆ ಆರಂಭವಾಗುತ್ತದೆ. ಕೊಟ್ಟ ಮಾತಿನಂತೆ ಶ್ರದ್ಧಾಭಕ್ತಿಯಿಂದ ಸಾಗುತ್ತದೆ.
ನಿರಂತರ ಶಿವಸ್ಮರಣೆಯಿಂದ ಈ ಭಾಗ, ಪುಣ್ಯಭೂಮಿ ಆಗುತ್ತದೆ. ಎಲ್ಲರ ಬದುಕಿನಲ್ಲೂ ಸುಖ- ಸಂತೋಷ ನೆಲೆಯಾಗುತ್ತದೆ ಎಂದು ಅಂದು ಪೂರ್ಣಾನಂದರು ಹೇಳಿದ್ದರಂತೆ. “ಅಂದು ಶ್ರೀಗಳು ಹೇಳಿದ ಮಾತು, ಇಂದು ನಿಜವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.
ಅಂದಾಜು 2 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದ ಪ್ರತಿ ಮನೆಗೆ ಒಂದೂವರೆ ತಿಂಗಳಿಗೊಮ್ಮೆ ಭಜನೆಯ ಸರದಿ ಬರುತ್ತದೆ. ಸರದಿ ಬಂದಾಗ ಆ ಮನೆಯಲ್ಲಿನ ಮಕ್ಕಳು, ಮಹಿಳೆಯರು, ಹಿರಿಯರು ಯಾರಾದರೊಬ್ಬರು ಶಿವಾನಂದ ಮಠಕ್ಕೆ ಬಂದು ಸ್ಮರಣೆಯಲ್ಲಿ ತೊಡಗಬೇಕು. ಇಲ್ಲಿಯತನಕ ಒಮ್ಮೆಯೂ ಸ್ಮರಣೆ ನಿಂತಿಲ್ಲ. ಸರದಿ ಬಂದವರ ಮನೆಯಲ್ಲಿ ಅಡಚಣೆ ಇದ್ದರೆ ಬೇರೆಯವರನ್ನು ಇಲ್ಲಿಗೆ ಕಳುಹಿಸುತ್ತಾರೆ.
ಮುಂದುವರಿದ ಸ್ಮರಣೆ!ಪೂರ್ಣಾನಂದ ಶ್ರೀಗಳು ಹೇಳಿದ ಪ್ರಕಾರವಾಗಿ 2009ಕ್ಕೆ ಸ್ಮರಣೆ ಮುಗಿಯಬೇಕಿತ್ತು. ಏಕೆಂದರೆ, ಹಾಕಿದ ಕರಾರಿನಂತೆ ಅಂದಿಗೆ 39 ವರುಷ ಮುಗಿಯುತ್ತದೆ. ಆದರೆ, ಮಠದ ಇಂದಿನ ಶ್ರೀ ಶ್ರದ್ಧಾನಂದ ಸ್ವಾಮೀಜಿ, “ಇನ್ನೂ ಛಲೋ ಆಗತದಾ, ಸ್ಮರಣೆ ನಿಲ್ಲಿಸಬೇಡಿ’ ಎಂದು ಊರವರಿಗೆ ಹೇಳಿದ್ದರಿಂದ ಅದನ್ನು ಮುಂದುವರಿಸಲಾಗಿದೆ. ಪ್ರವೀಣರಾಜು ಸೊನ್ನದ