ಹಾಂಕಾಂಗ್: ಸಿಕ್ಕ ಸಿಕ್ಕ ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಚೀನಾಕ್ಕೆ “ಕೋವಿಡ್ ಸಿಡಿಲು’ ಬಡಿದ ಮೇಲೆ ಬುದ್ಧಿ ಬಂದಿದೆ. ಈಗ ಅಲ್ಲಿ ಸಸ್ಯಜನ್ಯ ಪ್ರೊಟೀನ್ ಆಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಾಡುಪ್ರಾಣಿಗಳ ಮಾಂಸ ಮಾರುಕಟ್ಟೆಯಲ್ಲಿದ್ದರೂ, ಗ್ರಾಹಕರು ಅತ್ತ ಅಷ್ಟಾಗಿ ಮುಖ ಮಾಡುತ್ತಿಲ್ಲ. “ಕೋವಿಡ್ ವೈರಸ್ ಕಾರಣದಿಂದಾಗಿ ಚೀನಾ ಭಾಗದ ಜನರು ಆಹಾರಕ್ರಮ ಬದಲಾವಣೆಗೆ ಮುಂದಾಗಿದ್ದಾರೆ. ಮಾಂಸಾಹಾರಕ್ಕೆ ಪರ್ಯಾಯವಾಗಿರುವ ಸಸ್ಯಾಹಾರಗಳನ್ನು ಖರೀದಿಸುತ್ತಿದ್ದಾರೆ’ ಎಂದು ಹಾಂಕಾಂಗ್‌ನ ಫಿಟ್ನೆಸ್ ಕೋಚ್ ಮೈಕ್ ಲೀ ಹೇಳಿದ್ದಾರೆ. “ಹಂದಿ ಮಾಂಸಕ್ಕೆ ಪರ್ಯಾಯವಾಗಿ, ಸಸ್ಯಾಹಾರ ಬುರ್ರಿಟೊಗಳು ಖರೀದಿಯಾಗುತ್ತಿವೆ. ಹೋಟೆಲ್‌ಗಳು ಮುಚ್ಚಿರುವುದರಿಂದ, ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಚೀನಾವು ವಿಶ್ವದ ಅತಿದೊಡ್ಡ ಮಾಂಸೋತ್ಪನ್ನ ಗ್ರಾಹಕ ಎನ್ನುವ ಟೈಟಲ್, ಮುಂದಿನ ದಿನಗಳಲ್ಲಿ ಅಳಿಸಿಹೋಗಲಿದೆ’ ಎಂದಿದ್ದಾರೆ.