Advertisement

ತೆರಿಗೆ ಪಾವತಿಸದ ಟಾಕೀಸ್, ಬಾರ್‌ಗಳ ಮೇಲೆ ಪೌರಾಯುಕ್ತ ದಾಳಿ

07:07 PM Apr 13, 2022 | Team Udayavani |

ಗಂಗಾವತಿ: ನಗರಸಭೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಚಿತ್ರಮಂದಿರ ಹಾಗೂ ಬಾರ್‌ಗಳ ಮೇಲೆ ಪೌರಾಯುಕ್ತ ಹಾಗೂ ಪ್ರೋಬೆಷನರಿ ಐಎಎಸ್ ಅಧಿಕಾರಿ ಹೇಮಂತಕುಮಾರ ನೇತೃತ್ವದಲ್ಲಿ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದ್ದಾರೆ.

Advertisement

ನಗರದ ಚಂದ್ರಹಾಸ, ಶಿವೆ, ಕನಕದುರ್ಗಾ(ಪೂರ್ಣಿಮಾ), ಸಂದೀಪ್, ಎಚ್.ಎಂ.ಎಸ್ ಹಾಗೂ ನಕ್ಷತ್ರ ಬಾರ್ ಸೇರಿದಂತೆ ಇತರೆ ಬಾರಗಳಿಗೆ ತೆರಳಿ ಬೀಗ ಮುದ್ರೆ ಹಾಕಲಾಯಿತು.

ಕೆಲವು ಚಿತ್ರಮಂದಿರ ಮಾಲೀಕರು ಸ್ಥಳದಲ್ಲಿ ತೆರಿಗೆ ಹಣದ ಚೆಕ್ ವಿತರಿಸಿದ್ದು ತೆರಿಗೆ ಪಾವತಿಗೆ ಸಮಯಾವಕಾಶ ಕೇಳಿದ್ದಾರೆನ್ನಲಾಗಿದೆ.

ನಗರಸಭೆಯ ಆದಾಯ ವೃದ್ದಿ ಮಾಡಲು ಪೌರಾಯುಕ್ತ ಹಾಗೂ ಪ್ರೋಬೆಷನರಿ ಐಎಎಸ್ ಅಧಿಕಾರಿ ಹೇಮಂತಕುಮಾರ ಕಾರ್ಯ ತಂತ್ರ ರೂಪಿಸಿದ್ದು ನಗರಸಭೆಯ ಮಾಲೀಕತ್ವದ ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು ಬಹಳ ದಿನಗಳಿಂದ ಬಾಡಿಗೆ ಮಳಿಗೆಯಲ್ಲಿರುವವರಿಗೆ ಈಗಾಗಲೇ ನೋಟಿಸ್ ನೀಡಿದ್ದು ಪುನಹ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next