Advertisement

ಸಬ್ಸಿಡಿರಹಿತ LPG ಬೆಲೆ ಏರಿಕೆ-ಇಂದಿನಿಂದಲೇ ಜಾರಿ: ಪ್ರತಿ ಸಿಲಿಂಡರ್ ಗೆ 19 ರೂ. ಹೆಚ್ಚಳ

10:12 AM Jan 02, 2020 | Nagendra Trasi |

ನವದೆಹಲಿ: ಸಬ್ಸಿಡಿ ರಹಿತ ಎಲ್ ಪಿಜಿ(ಅಡುಗೆ ಅನಿಲ) ದರವನ್ನು 2020ರ ಜನವರಿ 1ರಿಂದಲೇ ಅನ್ವಯವಾಗುವಂತೆ ಪ್ರತಿ ಸಿಲಿಂಡರ್ ಗೆ 19 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಪ್ರಕಟಣೆ ಪ್ರಕಾರ, ಸಬ್ಸಿಡಿ ರಹಿತ ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 714 ರೂಪಾಯಿ, ಮುಂಬೈನಲ್ಲಿ 684.50 ರೂಪಾಯಿಗೆ ಏರಿಕೆಯಾಗಲಿದೆ. ಡಿಸೆಂಬರ್ ನಲ್ಲಿ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 695 ರೂಪಾಯಿ ಹಾಗೂ ಮುಂಬೈನಲ್ಲಿ 665 ರೂಪಾಯಿ ಆಗಿತ್ತು ಎಂದು ಇಂಡಿಯನ್ ಆಯಿಲ್ ವೆಬ್ ಸೈಟ್ ನಲ್ಲಿ ತಿಳಿಸಿದೆ.

ಚೆನ್ನೈನಲ್ಲಿ ಪ್ರತಿ ಸಿಲಿಂಡರ್ ಬೆಲೆ 734 ರೂಪಾಯಿ. ಬೆಂಗಳೂರಿನಲ್ಲಿ 697.50ರಷ್ಟಿದ್ದ ಬೆಲೆ ಈಗ 716.50 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಆಗಸ್ಟ್ ನಿಂದ ಈವರೆಗೆ ಸಿಲಿಂಡರ್ ಬೆಲೆಯಲ್ಲಿ ಒಟ್ಟು 140 ರೂಪಾಯಿ ಹೆಚ್ಚಳವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next