Advertisement
2020ರಲ್ಲಿ ಕೋವಿಡ್- 19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಪಸರಿಸಿದಾಗ ಹಲವಾರು ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನೇ ಬೀರಿತು. ಇದರಲ್ಲಿ ಚಲನಚಿತ್ರೋದ್ಯ ಮವೂ ಸೇರಿಕೊಂಡಿದೆ. ಪರಿಣಾಮ ಹಲವಾರು ಕಡೆಗಳಲ್ಲಿ ವಿವಿಧ ಹಂತಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಯಿತು, ಸಾರ್ವಜನಿಕರು ಹೆಚ್ಚಾಗಿ ಸೇರುವ ಉತ್ಸವಗಳನ್ನು ರದ್ದು ಪಡಿಸಲಾಯಿತು ಅಥವಾ ಮುಂದೂಡಲಾಯಿತು. ಹಲವಾರು ಚಲನಚಿತ್ರ ಬಿಡುಗಡೆಗಳಿಗೆ ದಿನಾಂಕ ನಿಗದಿಯಾ ಗಿತ್ತಾದರೂ ಅದನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಚಿತ್ರಮಂದಿರಗಳು ಮುಚ್ಚಿದ್ದರಿಂದ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಶತಕೋಟಿ ಡಾಲರ್ ಗಳು ಕುಸಿತ ಕಂಡಿರುವುದು ಅಂಕಿ ಅಂಶಗಳಿಂದ ಬಯಲಾಗಿದೆ.
Related Articles
Advertisement
ವಿಶ್ವದಾದ್ಯಂತ ಬಿಡುಗಡೆಯಾಗಿ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದಿರುವ ಕೆಜಿಎಫ್ ಅಧ್ಯಾಯ- 1ರ ಮುಂದುವರಿದ ಭಾಗ ಕೆಜಿಎಫ್ ಅಧ್ಯಾಯ- 2 ಜುಲೈನಲ್ಲಿ ಬಿಡುಗಡೆಯಾಗುತ್ತದೆ ಎಂದು ಎಲ್ಲ ವಿದೇಶಿ ಕನ್ನಡಿಗರು ಕಾಯುತ್ತಿದ್ದಾರೆ. ಯುಕೆ ಯಲ್ಲಿ ಕೆಜಿಎ ಫ್- 1ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಈ ಮೊದಲು ಅನೇಕ ಚಲನಚಿತ್ರಗಳು ಬಿಡುಗಡೆಯಾಗಿತ್ತು. ಅನೇಕ ಬಾರಿ ಚಲನಚಿತ್ರದಲ್ಲಿ ಖ್ಯಾತಿ ಪಡೆದವರಿಗಾಗಿಯೇ ಮೊದಲ ಪ್ರದರ್ಶನಗಳನ್ನು ಅದ್ಧೂರಿಯಾಗಿ ಲಂಡನ್ ನಲ್ಲಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನೇಕ ತಾರೆ ಯರು ಭೇಟಿ ನೀಡಿದ್ದಾರೆ.
ಮುಖ್ಯವಾಗಿ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಪ್ರಕಾಶ್ ರಾಜ್, ನಿರ್ದೇಶಕರಾದ ಯೋಗ ರಾಜ್ ಭಟ್, ಸುನಿ, ಪಿ.ವಾಸು, ಲಿಂಗದೇವರು ಮತ್ತು ಇನ್ನೂ ಅನೇಕರು ಪ್ರೀಮಿಯರ್ ಪ್ರದರ್ಶನಗಳಿಗೆ ಹಾಜರಾಗಿದ್ದರು. ಅವರೊಂದಿಗೆ ಅನೇಕ ಅನಿವಾಸಿ ಕನ್ನಡಿ ಗರು ಕುಳಿತು ಸಿನೆಮಾ ವೀಕ್ಷಣೆ ಮಾಡಿ , ಈ ಕುರಿತು ಸಂವಾದಗಳನ್ನೂ ನಡೆಸಿದ್ದರು. ಆದರೆ ಲಾಕ್ ಡೌನ್ ಆದ ಬಳಿಕ ಹೊರದೇಶಗಳಲ್ಲಿ ಯಾವುದೇ ಥಿಯೇಟರ್ ಗಳಲ್ಲಿ ಕನ್ನಡ ಸಿನೆಮಾಗಳು ತೆರೆ ಕಂಡಿಲ್ಲ. ಇದರಿಂದ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಸಿನೆಮಾ ನೋಡುವ ಅವಕಾಶ ಮಾತ್ರವಲ್ಲ ತಮ್ಮ ಮೆಚ್ಚಿನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಗಾಯಕರೊಂದಿಗೆ ಮಾತುಕತೆ ನಡೆಸುವ ಅವಕಾಶವೂ ಸಿಗುತ್ತಿಲ್ಲ. ಹೀಗಾಗಿ ಯಾವಾಗ ಥಿಯೇಟರ್ ಗಳಲ್ಲಿ ಚಲನ ಚಿತ್ರ ಪ್ರದರ್ಶನಕ್ಕಿರುವ ತೊಡಕುಗಳು ದೂರವಾಗು ವುದೋ?, ಯಾವಾಗ ಮನೆ ಮಂದಿ, ಸ್ನೇಹಿತರೊಡಗೂಡಿ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ದೊಡ್ಡ ಪರದೆಯಲ್ಲಿ ನೋಡಬಹುದೋ ಎನ್ನುವುದನ್ನು ಸಾಕಷ್ಟು ನಿರೀಕ್ಷೆಗಳೊಂದಿಗೆ ಬಹುತೇಕ ಅನಿವಾಸಿ ಕನ್ನಡಿಗರು ಕಾಯುವಂತಾಗಿದೆ.