Advertisement
ಬಿಜೆಪಿಯಿಂದ ಪಕ್ಷದಿಂದ ಅಣ್ಣಾಸಾಹೇಬ ಶಂಕರ ಜೊಲ್ಲೆ, ಕಾಂಗ್ರೆಸ್‌ದಿಂದ ಪ್ರಕಾಶ ಬಾಬಣ್ಣಾ ಹುಕ್ಕೇರಿ ಹಾಗೂ ಬಹುಜನ ಸಮಾಜ ಪಕ್ಷದಿಂದ ಮಚ್ಚೇಂದ್ರ ದವಲು ಕಾಡಾಪುರೆ, ಭಾರಿಫ್ ಬಹುಜನ ಮಹಾಸಂಘ ಪಕ್ಷದಿಂದಅಪ್ಪಾಸಾಹೇಬ ಕುರಣೆ, ಉತ್ತಮ ಪ್ರಜಾಕೀಯ ಪಕ್ಷದಿಂದ ಬಾಳಿಗಟ್ಟಿ ಪ್ರವೀಣಕುಮಾರ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷದಿಂದ ಮುಗದುಮ್ ಇಸ್ಮಾಯಿಲ್ ಮಗದುಮ್, ಕಲ್ಲಪ್ಪ ಅಡಿವೆಪ್ಪ ಗುಡಸಿ, ಜಿತೇಂದ್ರ ಸುಭಾಷ. ನೇರ್ಲೆ, ಮಲ್ಲಪ್ಪಾ ಮಾರುತಿ ಖಟಾಂವೆ, ಮೋಹನ ಗುರಪ್ಪಾ ಮೋಟನ್ನವರ, ವಿಶ್ವನಾಥ ವಾಜಂತ್ರಿ, ಶೈಲಾ ಸುರೇಶ ಕೋಳಿ ಹಾಗೂ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದ್ದಾರೆ
ಕಾರವಾರ: ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದೆ. ಹತ್ತು ಸೂಚಕರು ಇರಲಿಲ್ಲ ಎಂಬ ಕಾರಣದಿಂದ ನಾಮಪತ್ರ ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾ ಶಾಖೆ ನೀಡಿತ್ತು. ಆದರೆ ಹತ್ತು ಸೂಚಕರ ಬಗ್ಗೆ ಅದರಲ್ಲಿ ತಿಳಿಸಿರಲಿಲ್ಲ ಎಂದು ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದ ಖಾನಾಪುರದ ಕೃಷ್ಣಾಜೀ ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವಾಗ ನನಗೆ ಹತ್ತು ಸೂಚಕರ ಬಗ್ಗೆ ಮಾಹಿತಿ ಇರಲಿಲ್ಲ. ಚುನಾವಣಾಧಿ ಕಾರಿಗಳು ಹೇಳಿರಲಿಲ್ಲ ಎಂದು ದೂರಿದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೃಷ್ಣಾಜೀ ಪಾಟೀಲ ಹೇಳಿದ್ದಾರೆ