Advertisement

ನಾಮನಿರ್ದೇಶಕ್ಕೆ ಇನ್ನೂ ಬೀಳದ ರಾಜ್ಯಪಾಲರ ಅಂಕಿತ

10:05 AM May 11, 2017 | Team Udayavani |

ಬೆಂಗಳೂರು:ರಾಜ್ಯ ವಿಧಾನ ಪರಿಷತ್‌ಗೆ ಮೂವರ ಹೆಸರನ್ನು ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟು ವಾರ ಕಳೆದರೂ ಇನ್ನೂ ಅಂಕಿತ ದೊರೆತಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮೂವರ ಹೆಸರುಗಳನ್ನು ಶಿಫಾರಸ್ಸು ಮಾಡಿರುವುದಕ್ಕೆ ಸೂಕ್ತ ವಿವರಣೆ ನೀಡಿದ್ದರು.ಆದರೂ, ರಾಜ್ಯಪಾಲರು ಕೆಲವು ಸ್ಪಷ್ಟನೆ ಕೇಳಿದ್ದಾರೆ. ಹೀಗಾಗಿ, ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

Advertisement

ಪಿ.ಆರ್‌. ರಮೇಶ್‌, ಲಿಂಗಪ್ಪ ಹಾಗೂ ಮೋಹನ್‌ ಕೊಂಡಜ್ಜಿ ಕಾಂಗ್ರೆಸ್‌ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿರುವುದರಿಂದ ರಾಜ್ಯಪಾಲರು ಅವರ ಹೆಸರುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಪಷ್ಟನೆ ಕೋರಿದ್ದಾರೆ ಎನ್ನಲಾಗಿದೆ.

ಮೂವರು ನಾಮಕರಣ ಶಿಫಾರಸು ರಾಜ್ಯಪಾಲರು ವಾಪಸ್‌ ಕಳುಹಿಸುತ್ತಾರಾ ಎಂಬ ಆತಂಕವೂ ರಾಜ್ಯ ಸರ್ಕಾರಕ್ಕೆ ಇದೆ. ಯಾಕೆಂದರೆ ಹಿಂದೊಮ್ಮೆ ಬಿಜೆಪಿಯಿಂದ ಸೋಮಣ್ಣ ಅವರನ್ನು ನಾಮಕರಣ ಮಾಡಲು ಶಿಫಾರಸು ಮಾಡಿದ್ದಾಗ ಆಗಿನ ರಾಜ್ಯಪಾಲರು ವಾಪಸ್‌ ಕಳುಹಿಸಿದ್ದರು.

ಆದರೆ, ಮುಖ್ಯಮಂತ್ರಿಯವರು ಭೇಟಿ ಮಾಡಿ ಸೂಕ್ತ ವಿವರಣೆ ನೀಡಿರುವುದರಿಂದ ಮೂವರ ನಾಮನಿರ್ದೇಶಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next