Advertisement

ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

12:49 PM Apr 17, 2018 | Team Udayavani |

ಮೈಸೂರು: ವಿಧಾನಸಭೆ ಚುನಾವಣೆ ಸಂಬಂಧ ಆಯಾಯ ತಾಲೂಕು ಚುನಾವಣಾಧಿಕಾರಿಗಳು ಮಂಗಳವಾರ ಅಧಿಸೂಚನೆ ಹೊರಡಿಸಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.24 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ.  25ರಂದು ನಾಮಪತ್ರಗಳ ಪರಿಶೀಲನೆ, 27 ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಮೇ 12ರಂದು ಮತದಾನ ಹಾಗೂ 15ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಪಿರಿಯಾಪಟ್ಟಣ: ವಿಧಾನಸಭಾ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ, ಕೆ.ಆರ್‌.ನಗರ ಕ್ಷೇತ್ರದಲ್ಲಿ ಮಿನಿ ವಿಧಾನಸೌಧ, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿ, ಎಚ್‌.ಡಿ.ಕೋಟೆ- ಮಿನಿ ವಿಧಾನಸೌಧ, ನಂಜನಗೂಡು-ಮಿನಿ ವಿಧಾನಸೌಧ,  ಚಾಮುಂಡೇಶ್ವರಿ-ಮಿನಿ ವಿಧಾನಸೌಧ, ಮೈಸೂರು.

ಕೃಷ್ಣರಾಜ ಕ್ಷೇತ್ರ: ಮೈಸೂರು ಮಹಾ ನಗರಪಾಲಿಕೆ ಮುಖ್ಯ ಕಚೇರಿ, ಚಾಮರಾಜ ಕ್ಷೇತ್ರ- ಮೈಸೂರು ಮಹಾ ನಗರಪಾಲಿಕೆ ಮುಖ್ಯ ಕಚೇರಿ ಒಂದನೇ ಮಹಡಿ, ನರಸಿಂಹರಾಜ ಕ್ಷೇತ್ರ- ಚಾಮುಂಡಿ ವಿಹಾರ ಕ್ರೀಡಾಂಗಣ, ವರುಣಾ ಕ್ಷೇತ್ರ- ತಾಲೂಕು ಪಂಚಾಯ್ತಿ ಕಚೇರಿ, ನಂಜನಗೂಡು. ತಿ.ನರಸೀಪುರ ಕ್ಷೇತ್ರ- ಮಿನಿವಿಧಾನಸೌಧದಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು ಎಂದರು. 

ಜಿಲ್ಲೆಯಲ್ಲಿ 9 ಸಾಮಾನ್ಯ ಹಾಗೂ 8 ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಒಟ್ಟು 2860 ಮತಗಟ್ಟೆಗಳ ಪೈಕಿ ಶೇ.10 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌, ವೀಡಿಯೋ ಚಿತ್ರೀಕರಣ ಹಾಗೂ ವೆಬ್‌ ಕ್ಯಾಮರಾ ಕವರೇಜ್‌ ಮಾಡಲಾಗುವುದು. ಚುನಾವಣಾ ಕಾರ್ಯಕ್ಕೆ 18ಸಾವಿರ ಸಿಬ್ಬಂದಿ ನೇಮಿಸಲಾಗಿದೆ. ಈ ವಾರದ ಕೊನೆಯಲ್ಲಿ ಕ್ಷೇತ್ರವಾರು ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

Advertisement

ಮುಕ್ತಾಯ: ಅರಮನೆ ಭದ್ರತಾ ಎಸಿಪಿ ವಾಹನದಲ್ಲಿ ಚುನಾವಣೆಗೆ ಹಣ ಸಾಗಿಸಲಾಗುತ್ತಿದೆ ಎಂದು ಮೂಗರ್ಜಿ ಬರೆದಿದ್ದ ಪ್ರಕರಣದಲ್ಲಿ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ವಿರುದ್ಧ ನೇರ ಆರೋಪ ಇಲ್ಲದ ಕಾರಣ ಆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಹೇಳಿದರು.

ಇನ್ನು ಕೆ.ಆರ್‌.ನಗರದಲ್ಲಿ ಅಂಬೇಡ್ಕರ್‌ ಜಯಂತಿ ಆಚರಣೆ ವೇಳೆ ಟೀ-ಶರ್ಟ್‌ ಹಂಚಿಕೆ ಸಂಬಂಧ ದಾಖಲಿಸಿಕೊಂಡಿರುವ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ ಎಂದರು. ಈವರೆಗೆ ಜಿಲ್ಲೆಯಲ್ಲಿ 7.48 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಹೆಚ್ಚಿನ ನಗದು ವಶವಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾದ ನಂತರ ಚೆಕ್‌ ಪೋಸ್ಟ್‌ಗಳನ್ನು ಇನ್ನಷ್ಟು ತೆರೆಯಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next