Advertisement
ಭಾರತದಲ್ಲಿ ಎಚ್‌ಪಿ, ಲೆನೊವೊ ಮತ್ತು ಡೆಲ್ ಕಂಪನಿ ಗಳು ಶೇ.70 ಮಾರುಕಟ್ಟೆ ಪಾಲು ಹೊಂದಿವೆ. ಈಗಿನ ಮಾರುಕಟ್ಟೆ ಟ್ರೆಂಡ್ ಅರಿತ ನೋಕಿಯಾ, ಇನ್ನೊಮ್ಮೆ ಲ್ಯಾಪ್ ಟಾಪ್ ಮಾರುಕಟ್ಟೆ ಪ್ರವೇಶಿಸಿದೆ. ಹೌದು! ಇನ್ನೊಮ್ಮೆ! ಹತ್ತು ವರ್ಷಗಳ ಹಿಂದೆ ಬುಕ್ ಲೆಟ್ 3ಜಿ ಎಂಬ ಹೆಸರಿನ ಲ್ಯಾಪ್‌ಟಾಪ್ ಅನ್ನು ನೋಕಿಯಾ ಬಿಡುಗಡೆ ಮಾಡಿತ್ತು. ಅದೇ ಅದರ ಮೊದಲ ಮತ್ತು ಕೊನೆಯ ಲ್ಯಾಪ್‌ಟಾಪ್ ಸಹ ಆಗಿ ಹೋಗಿತ್ತು!
ಈಗ ಒಂದು ದಶಕದ ನಂತರ ನೋಕಿಯಾ ಲ್ಯಾಪ್‌ಟಾಪ್ ಮಾರುಕಟ್ಟೆಗೆ ಕಾಲಿಡುತ್ತಿದೆ. ಇಲ್ಲೊಂದು ವಿಶೇಷವಿದೆ. ನೋಕಿಯಾ ಲ್ಯಾಪ್‌ಟಾಪ್ ವಿಭಾಗ, ಫಿನ್ಲಂಡಿನ ಮೂಲ ನೋಕಿಯಾ ಒಡೆತನದಲ್ಲೇ ಇದೆ. ಹಾಗಾಗಿ ಲ್ಯಾಪ್‌ಟಾಪ್ ವಿಭಾಗದಲ್ಲಿ ಮೂಲ ನೋಕಿಯಾ ಗುಣಮಟ್ಟ , ತಾಂತ್ರಿಕತೆಯನ್ನು ನಿರೀಕ್ಷಿಸಬಹುದು. ಮೊಬೈಲ್ ವಿಭಾಗದ ಲೈಸೆನ್ಸ್ ಹೊಂದಿರುವುದು ಎಚ್‌ಎಂಡಿ ಗ್ಲೋಬಲ್ ಮೂಲ ನೋಕಿಯಾ ಒಡೆತನ, ನಿರ್ವಹಣೆ ಇಲ್ಲದ ಕಾರಣ ಈಗಿನ
ನೋಕಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಅಂಥ ಯಶಸ್ಸು ಸಾಧಿಸಲಿಲ್ಲ. ಮೊಬೈಲ್ ಹೆಸರು ನೋಕಿಯಾ ಆದರೂ ಅದರ ಉತ್ಪಾದಕ ಮತ್ತು ನಿರ್ವಾಹಕ, ಮಾಲೀಕ ಎಚ್.ಎಂ.ಡಿ. ಗ್ಲೋಬಲ್ . ಆದರೆ ಲ್ಯಾಪ್ ಟಾಪ್‌ನ ಮಾಲೀಕತ್ವ ಮೂಲ ನೋಕಿಯಾದ್ದೇ ಆಗಿದೆ. ಫ್ಲಿಪ್‌ಕಾರ್ಟ್ ಕಂಪನಿ ಸಹಭಾಗಿತ್ವ ವಹಿಸಿದೆ. ಭಾರತದಲ್ಲಿ ನೋಕಿಯಾ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡುತ್ತಿರುವುದು ಫ್ಲಿಪ್ ಕಾರ್ಟ್ ಕಂಪನಿ. ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ನೋಕಿಯಾದ ನೂತನ ಲ್ಯಾಪ್ ಟಾಪ್ ಹೆಸರು ಪ್ಯೂರ್ ಬುಕ್ ಎಕ್ಸ್ 14. ಇದು 1.1 ಕೆಜಿ ತೂಕವಿದ್ದು, 16.8 ಮಿ. ಮೀ.ನಷ್ಟು ತೆಳುವಾಗಿದೆ. ಮೆಗ್ನಿಶಿಯಂ, ಅಲ್ಯು ಮಿನಿಯಂ ಬಾಡಿ ಹೊಂದಿದೆ. 14 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಪರದೆ ಹೊಂದಿದೆ. 4.2 ಗಿಗಾಹರ್ಟ್ ಇಂಟೆಲ್ ಐ5 10ನೇ ತಲೆಮಾರಿನ ನಾಲ್ಕು ಕೋರ್‌ಗಳ ಪೊ›ಸೆಸರ್ ಇದೆ. ಇದು ವಿಂಡೋಸ್ 10 ಹೋಂ ಅನ್ನು ಮೊದಲೇ ಒಳಗೊಂಡಿದೆ.
Related Articles
ಪೋರ್ಟ್. ಒಂದು ಯುಎಸ್‌ಬಿ ಟೈಪ್ ಸಿ ಪೋರ್ಟ್, ತಲಾ ಒಂದು ಎಚ್‌ಡಿಎಂಐ ಮತ್ತು ಆರ್‌ಜೆ45 ಪೋರ್ಟ್ ಹೊಂದಿದೆ. ಈ ಲ್ಯಾಪ್ ಟಾಪ್ 512ಜಿಬಿ ಎಸ್‌ಎಸ್‌ಡಿ, 8 ಜಿಬಿ ರ್ಯಾಮ್ ಹೊಂದಿದೆ. ವಿಂಡೋಸ್ ಹಲೋ ಫೇಸ್ ಅನ್ಲಾಕ್ ಸೌಲಭ್ಯ ಇದೆ. ಅಂತರ್ಗತ ಇಂಟೆಲ್ ಯುಎಚ್‌ಡಿ 620 ಗ್ರಾಫಿಕ್ಸ್ ಹೊಂದಿದೆ. 65 ವ್ಯಾಟ್ಸ್‌ನ ಚಾರ್ಜರ್ ಹೊಂದಿದ್ದು, ಬ್ಯಾಟರಿ 8 ಗಂಟೆಯಷ್ಟು ದೀರ್ಘಕಾಲ ಬರುತ್ತದೆ ಎಂದು ಕಂಪನಿ ತಿಳಿಸಿದೆ. ಇದರ ದರ 59,990 ರೂ. ಗಳಾಗಿದ್ದು, ಫ್ಲಿಪ್‌ಕಾರ್ಟ್ ನಲ್ಲಿ ಮಾತ್ರ ಲಭ್ಯ.
Advertisement
*ಕೆ.ಎಸ್. ಬನಶಂಕರ ಆರಾಧ್ಯ