Advertisement

ಮೇ 18ಕ್ಕೆ ಹೊಸ ಲುಕ್ ನಲ್ಲಿ ನೋಕಿಯಾ 3310 ಭಾರತದ ಮಾರುಕಟ್ಟೆಗೆ ಲಗ್ಗೆ

02:07 PM May 16, 2017 | |

ನವದೆಹಲಿ:ನೋಕಿಯಾ ಅಭಿಮಾನಿಗಳು ಇನ್ನು ಹೆಚ್ಚು ಕಾಯಬೇಕಾಗಿಲ್ಲ, ಹೌದು ನೋಕಿಯಾ 3310 ಹೊಸ ವಿನ್ಯಾಸದೊಂದಿಗೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಲಿದ್ದು, ಭಾರತದಲ್ಲಿ ನೋಕಿಯಾ 3310 ದರ 3,310 ರೂಪಾಯಿ. ಮೇ 18ರಿಂದ ನೋಕಿಯಾ 3310 ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.

Advertisement

ಎಚ್ ಎಂಡಿ ಗ್ಲೋಬಲ್ ಆರಂಭಿಕವಾಗಿ ನೋಕಿಯಾ 3310 ಮೊಬೈಲ್ ಅನ್ನು ತಯಾರಿಸಿತ್ತು, ಇದೀಗ ನೋಕಿಯಾ ಬ್ರ್ಯಾಂಡ್ ಅನ್ನೇ ಉಪಯೋಗಿಸಿದೆ. ಈ  ಮೂಲಕ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಅದೇ ರೀತಿ ಅಂಡ್ರಾಯ್ಡ್ ಪವರ್ಡ್ ಫೋನ್ ಗಳಾದ ನೋಕಿಯಾ 6, ನೋಕಿಯಾ 3 ಹಾಗೂ ನೋಕಿಯಾ 5 ಜೂನ್ ನಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ವಿನ್ಯಾಸದ ನೋಕಿಯಾ ಮೊಬೈಲ್ ಹಲವು ವಿಧದಲ್ಲಿ ವೈವಿಧ್ಯತೆ ಹೊಂದಿದೆ. ನೂತನ 3310 ನೋಕಿಯಾ ತುಂಬಾ ವೇಗವಾಗಿದೆ, ಆಧುನಿಕ ವಿನ್ಯಾಸ ಹಾಗೂ ಉತ್ತಮ ಹಾರ್ಡ್ ವೇರ್ ಇದ್ದಿರುವುದಾಗಿ ವಿವರಿಸಿದೆ. 

ನೂತನ ನೋಕಿಯಾದ ಡಿಸ್ ಪ್ಲೇ ಮತ್ತು ವಿನ್ಯಾಸದಲ್ಲಿ ತುಂಬಾ ಬದಲಾವಣೆ ಮಾಡಲಾಗಿದೆ. ಹೊಸ ನೋಕಿಯಾ 3310ದಲ್ಲಿ 2.4 ಇಂಚಿನ ಕಲರ್ ಡಿಸ್ ಪ್ಲೇ ಇದೆ. ಫೀಚರ್ಸ್ ನಲ್ಲೂ ಬದಲಾವಣೆ ಮಾಡಲಾಗಿದೆ. ಡ್ಯುಯೆಲ್ ಸಿಮ್ ಕಾರ್ಡ್, 2 ಮೆಗಾ ಫಿಕ್ಸಲ್ ಕ್ಯಾಮೆರಾ ಮತ್ತು ಬ್ಯಾಟರಿ ಅವಧಿ 22 ಗಂಟೆ ಇರಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next