Advertisement

ಶಬ್ದಮಾಲಿನ್ಯ ಉಂಟು ಮಾಡುವವರ ವಿರುದ್ದ ಕಾನೂನು ಕ್ರಮ

06:24 PM Jul 03, 2021 | Team Udayavani |

ಬೆಂಗಳೂರು: ಶಬ್ದ ಮಾಲಿನ್ಯ(ನಿಯಂತ್ರಣನಿಯಮ)ಅಧಿನಿಯಮಗಳು-2000 ಜಾರಿಗೆ ತರಬೇಕು ಮತ್ತುಶಬ್ದ ಮಾಲಿನ್ಯ ನಿಯಂತ್ರಣನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ-1986ರಸೆಕ್ಷನ್‌ 15ರಡಿ ದೂರು ದಾಖಲಿಸಬೇಕು ಎಂದು ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್‌ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ನಗರಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಹೈಕೋರ್ಟ್‌ಗೆಪ್ರಮಾಣಪತ್ರ ಸಲ್ಲಿಸಿದ್ದಾರೆ.

Advertisement

ಧಾರ್ಮಿಕ ಕೇಂದ್ರಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕ ಬಳಸಿ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲುಆದೇಶಿಸುವಂತೆಕೋರಿ ಗಿರೀಶ್‌ ಭಾರದ್ವಾಜ್‌ ಸಲ್ಲಿಸಿದ್ದಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದವಿಚಾರಣೆ ವೇಳೆ ನಗರ ಪೊಲೀಸ್‌ಆಯುಕ್ತರ ಕಚೇರಿಯ ಗುಪ್ತಚರ ವಿಭಾಗದ ಡಿಸಿಪಿಪ್ರಮಾಣಪತ್ರಸಲ್ಲಿಸಿ, ಶಬ್ದ ಮಾಲಿನ್ಯಉಂಟು ಮಾಡಿದ12 ಧಾರ್ಮಿಕ ಕೇಂದ್ರಗಳ ಸ್ಥಳ ಪರಿಶೀಲಿಸಲಾಯಿತು.ಅವುಗಳ ಉಸ್ತುವಾರಿಗಳಿಗೆ ಶಬ್ದ ಮಾಲಿನ್ಯ ಉಂಟುಮಾಡದಂತೆ ಸೂಚಿಸಲಾಗಿದೆ.

ಪ್ರಸ್ತುತ ಸನ್ನಿವೇಶಕ್ಕೆಪರಿಗಣಿಸಿ ಶಬ್ದ ಮಾಲಿನ್ಯ ಕಾಯ್ದೆಯ ನಿಯಮಗಳನ್ನುಮರು ಪರಿಶೀಲಿಸುವ ಅಗತ್ಯವಿದೆಯೆಂದು ಹೈಕೋರ್ಟ್‌ ಗೆ ತಿಳಿಸಿದರು. ಅದಕ್ಕೆ ಆಕ್ಷೇಪಿಸಿದ್ದ ನ್ಯಾಯ ಪೀಠ, ದೂರುಪರಿಶೀಲಿಸಿ ಕಾನೂನು ಪ್ರಕಾರ ಕ್ರಮಜರುಗಿಸದೆ ಧಾರ್ಮಿಕ ಕೇಂದ್ರಗಳಉಸ್ತುವಾರಿಗಳಿಗೆ ಶಬ್ದ ಮಾಲಿನ್ಯ ಉಂಟುಮಾಡದಂತೆ ಸೂಚಿಸಿರುವುದು ಮತ್ತು ಶಬ್ದಮಾಲಿನ್ಯ ನಿಯಮಗ ಳನ್ನು ಪರಿಶೀಲಿಸುವ ಅಗತ್ಯವಿದೆಎಂದು ಡಿಸಿಪಿ ಹೇಳಿರು ವುದು ಸರಿಯಲ್ಲ. ಆದ್ದರಿಂದಡಿಸಿಪಿಯ ಪ್ರಮಾಣಪತ್ರಕ್ಕೆ ವಿವರಣೆ ನೀಡಿ ನಗರಪೊಲೀಸ್‌ ಆಯುಕ್ತರು ವೈಯಕ್ತಿಕವಾಗಿ ಪ್ರಮಾಣ ಪತ್ರಸಲ್ಲಿಸಬೇಕು ಎಂದು ತಿಳಿಸಿತ್ತು. ಹಾಗೆಯೇ, ಶಬ್ದಮಾಲಿನ್ಯ ಬಗ್ಗೆ ದೂರು ದಾಖಲಾದ ಪೊಲೀಸ್‌ಠಾಣೆಗಳಿಗೆ ಶಬ್ದ ಮಾಲಿನ್ಯ ಅಳೆಯುವ ಮಾಪಕಒದಗಿಸಲಾಗಿದೆ? ಅವುಗಳು ಕಾರ್ಯ ನಿರ್ವಹಣೆಸ್ಥಿತಿಯಲ್ಲಿವೆ? ಅವುಗಳನ್ನು ಬಳಸುವ ತರಬೇತಿಪೊಲೀಸರಿಗೆ ಕಲ್ಪಿಸಲಾಗಿದೆಯೇ? ನಗರದ ಪೊಲೀಸ್‌ಠಾಣೆಗೆಳಿಗೆ ಎಷ್ಟು ಮಾಪಕಗಳ ಅಗತ್ಯವಿದೆ ಎಂಬ ಬಗ್ಗೆವಿವರಣೆ ನೀಡುವಂತೆ ಆಯುಕ್ತರಿಗೆ ‌ಸೂಚಿಸಿತ್ತು.

ಅದರಂತೆ, ಪ್ರಮಾಣಪತ್ರ ಸಲ್ಲಿಸಿದ ನಗರ ಪೊಲೀಸ್‌ಆಯುಕ್ತ ಕಮಲ್‌ಪಂತ್‌, ಶಬ್ದ ಮಾಲಿನ್ಯ ಉಂಟುಮಾಡಿದ ನಗರದ8 ಮಸೀದಿ, ಒಂದು ಚರ್ಚ್‌ ಮತ್ತುಮೂರು ದೇÊಸಾ‌ §ನಗಳ ವಿರುದ್ಧ ಆಯಾ ವಿಭಾಗದಎಸಿಪಿ ಕಾನೂನು ಕ್ರಮ ಜರುಗಿಸಿದ್ದಾರೆ. ಕಾನೂನು ಮತ್ತು ಸುÊÂವ ‌Ó§ ನೋಡಿಕೊಳ್ಳುವ ನಗರದ ಎಲ್ಲಾಪೊಲೀಸ್‌ ಠಾಣೆಗಳಿಗೆ ಶಬ್ದ ಮಾಲಿನ್ಯ ಅಳೆಯುವಮಾಪಕ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next