Advertisement

ಯುವಕರಿಗೆ ಹೇಳಿ ಮಾಡಿಸಿದಂತಿದೆ ನಾಯ್ಸ್‌ ಫಿಟ್ ಕೋರ್ ಸ್ಮಾರ್ಟ್‌ ವಾಚ್..! ಇಲ್ಲಿದೆ ಮಾಹಿತಿ

02:13 PM Sep 07, 2021 | Team Udayavani |

ನವ ದೆಹಲಿ : ಯುವ ಜನರನ್ನು ಆಕರ್ಷಿಸುವ ಪ್ರಧಾನ ಉದ್ದೇಶದಿಂದ ಸ್ಮಾರ್ಟ್ ವಾಚ್ ಕಂಪೆನಿಗಳ ಪ್ರಮುಖ ಕಂಪೆನಿಗಳಲ್ಲಿ ಒಂದಾದ ನಾಯ್ಸ್ ಹೊಸ ಅತ್ಯಾಕರ್ಷಕ ವಾಚ್ ವೊಂದನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

Advertisement

ಇತ್ತೀಚಿನ ದಿನಗಳಲ್ಲಂತೂ ಯುವ ಜನರು ಫಿಟ್ನೆಸ್ ಕ್ರೇಸ್ ಹೊಂದಿರುತ್ತಾರೆ. ಅಂತಹ ಯುವ ಪೀಳಿಗೆಗಾಗಿಯೇ ನಾಯ್ಸ್ ಈ ಹೊಸ ಸ್ಮಾರ್ಟ್ ವಾಚ್ ನನ್ನು ಬಿಡುಗಡೆ ಮಾಡಿದ್ದು. ಬೆಲೆ ಹಾಗೂ ವಿಶೇಷತೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಷರತ್ತು ಹಿಂಪಡೆಯದಿದ್ದರೆ ಪ್ರತಿಭಟನೆ: ಖಾನಪ್ಪನವರ

ಈ ಬಗ್ಗೆ ಪ್ರತಿಕ್ರಿಯಿಸಿದ ಕಂಪೆನಿ, ನಾಯ್ಸ್‌ ಫಿಟ್ ಕೋರ್ ಸ್ಮಾರ್ಟ್‌ ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿರಲಿದೆ. ಆಂಡ್ರಾಯ್ಡ್ ಹಾಗೂ ಐ ಫೋನ್ ನೊಂದಿಗೆ ಹೊಸ ನಾಯ್ಸ್‌ ಫಿಟ್ ಸ್ಮಾರ್ಟ್‌ ವಾಚ್ ಬಳಕೆ ಮಾಡಬಹುದಾಗಿದೆ ಎಂದಿದೆ.

ಇನ್ನು, ಈ ಅತ್ಯಾಕರ್ಷಕ ಸ್ಮಾರ್ಟ್ ವಾಚ್ ನ ಬೆಲೆಯ ಬಗ್ಗೆ ಎಲ್ಲರಿಗೂ ಕತೂಹಲವಂತೂ ಇದ್ದೇ ಇರುತ್ತದೆ. ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ವಾಚ್ ನ ಬೆಲೆ ಕೇವಲ 2,999 ರೂ ಆಗಿದೆ. ಸ್ಮಾರ್ಟ್ ಲುಕ್ ಗೆ ಈ  ಹೊಸ ನಾಯ್ಸ್‌ ಫಿಟ್ ಕೋರ್ ಸ್ಮಾರ್ಟ್‌ ವಾಚ್ ಹೇಳಿ ಮಾಡಿಸಿದಂತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Advertisement

1.28 ಇಂಚಿನ ಟಿಎಫ್‌ ಟಿ ಡಿಸ್‌ ಪ್ಲೇ ಹೊಂದಿರುವ ಈ ಸ್ಮಾರ್ಟ್ ವಾಚ್ ಚಿತ್ತಾಕರ್ಷಕ ಬಣ್ಣಗಳ ಆಯ್ಕೆಗಳಲ್ಲಿಯೂ ಲಭ್ಯವಿದೆ. ನಾಯ್ಸ್‌ ಫಿಟ್ ಕೋರ್ ಸ್ಮಾರ್ಟ್‌ ವಾಚ್ ಉಳಿದೆಲ್ಲಾ ವಾಚ್ ಗಳಿಗಿಂತ ಹೇಗೆ ಭಿನ್ನವೆಂದರೇ, , 13 ವಿವಿಧ ಸ್ಪೋರ್ಟ್ಸ್ ಮೋಡ್ ಗಳ ಆಯ್ಕೆ ಕೂಡ ಈ ಸ್ಮಾರ್ಟ್ ವಾಚ್ ನಲ್ಲಿ ಲಭ್ಯವಿದೆ.

ಇನ್ನು, ಕಂಪನಿ ವೆಬ್‌ ಸೈಟ್ ಮೂಲಕವೂ ಕೂಡ ಆನ್‌ ಲೈನ್‌ ನಲ್ಲಿ ೀ ಹೊಸ ಸ್ಮಾರ್ಟ್‌ ವಾಚ್ ಲಭ್ಯವಿದೆ.

ಇದನ್ನೂ ಓದಿ : ಪ್ರತಿಭಟನೆ ನಿರತ ರೈತರ ವಿರುದ್ಧ ಬಲ ಪ್ರಯೋಗ ಮಾಡುವವರಿಗೆ ಕ್ರಮ ಕೈಗೊಳ್ಳುವಂತೆ ರೈತರ ಒತ್ತಾಯ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next