Advertisement

Heart Attack: ಕ್ರಿಕೆಟ್ ಆಡುತ್ತಲೇ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು

12:40 PM Jan 10, 2024 | Team Udayavani |

ನೋಯ್ಡಾ: ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಪ್ರತಿದಿನ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಇದೀಗ ನೋಯ್ಡಾದಿಂದ ಅಂತಹುದೇ ಪ್ರಕರಣವೊಂದು ಬಂದಿದ್ದು, ಕ್ರಿಕೆಟ್ ಮ್ಯಾಚ್ ಆಡುತ್ತಿದ್ದ ವ್ಯಕ್ತಿಯೊಬ್ಬ ರನ್ ತೆಗೆದುಕೊಳ್ಳುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ.

Advertisement

ಈ ಘಟನೆಯು ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್ -135 ರಲ್ಲಿ ನಡೆದಿದ್ದು, ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಉತ್ತರಾಖಂಡ ಮೂಲದ 36 ವರ್ಷದ ವಿಕಾಸ್ ನೇಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆಟದ ವೇಳೆ ವಿಕಾಸ್ ರನ್ ತೆಗೆದುಕೊಳ್ಳಲು ಓದಿದ್ದಾರೆ ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್ ನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ವಿಕಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು. ವಿಕಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಕಾಸ್ ರನ್ ತೆಗೆದುಕೊಳ್ಳಲು ಓಡಿ ನಂತರ ಪಿಚ್ ಮೇಲೆ ಬೀಳುವುದು ಕಂಡುಬಂದಿದೆ.

ಇದನ್ನೂ ಓದಿ: Derails: ನಿಲ್ದಾಣ ತಲುಪುತ್ತಿದ್ದಂತೆ ಹಳಿತಪ್ಪಿದ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲು…

 

Advertisement

Advertisement

Udayavani is now on Telegram. Click here to join our channel and stay updated with the latest news.

Next