Advertisement

Bigg Boss OTT 2 ವಿಜೇತ ಎಲ್ವಿಶ್ ಯಾದವ್ ಬಂಧಿಸಿದ ಪೊಲೀಸರು

03:59 PM Mar 17, 2024 | Team Udayavani |

ನೋಯ್ಡಾ: ನೋಯ್ಡಾ ಪೊಲೀಸರು ಯೂಟ್ಯೂಬರ್ ಮತ್ತು ಬಿಗ್ ಬಾಸ್ OTT 2 ವಿಜೇತ ಎಲ್ವಿಶ್ ಯಾದವ್ ಅವರನ್ನು ಸುದೀರ್ಘ ವಿಚಾರಣೆಯ ನಂತರ ಬಂಧಿಸಿದ್ದಾರೆ. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ನೋಯ್ಡಾ ಡಿಸಿಪಿ ವಿದ್ಯಾ ಸಾಗರ್ ಮಿಶ್ರಾ ತಿಳಿಸಿದ್ದಾರೆ.

Advertisement

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ವಿಶ್ ಯಾದವ್ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಯೂಟ್ಯೂಬರ್ ಎಲ್ವಿಶ್ ಯಾದವ್ ಸೇರಿದಂತೆ ಆರು ಜನರ ವಿರುದ್ಧ ವನ್ಯಜೀವಿ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next